ಮಂಗಳವಾರ, ಏಪ್ರಿಲ್ 20, 2021
29 °C

ಬಾರದ ಆದೇಶ: ಸಂಕಷ್ಟದಲ್ಲಿ ಸಹಕಾರ ಸಂಘಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಈವರೆಗೂ ಯಾವುದೇ ಆದೇಶ ಹೊರಡಿಸದ ಕಾರಣ ಸಹಕಾರ ಸಂಘಗಳು ತೀವ್ರ ಸಂಕಷ್ಟಕ್ಕೊಳಗಾಗಿವೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎ. ನರಸಿಂಹಪ್ಪ ಆರೋಪಿಸಿದರು.

ಸರ್ಕಾರ ರೂ. 25 ಸಾವಿರದವರೆಗಿನ ಸಾಲ ಮತ್ತು ಬಡ್ಡಿ ಮನ್ನಾ ಮಾಡಿದೆ ಎಂದು ರೈತರು ಸಹಕಾರ ಸಂಘಗಳಿಗೆ ಪಾವತಿಸಬೇಕಾದ ಹಣ ಪಾವತಿಸುತ್ತಿಲ್ಲ. ಆದರೆ, ಕಸಬಾ ಸಂಘ ಮಾತ್ರ ಡಿಸಿಸಿ ಬ್ಯಾಂಕ್‌ಗೆ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರ ಸಂಘಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಸಾಲ ಮನ್ನಾ ಸಂಬಂಧ ಸ್ಪಷ್ಟ ಆದೇಶ ಹೊರಡಿಸಬೇಕು. ಹೆಚ್ಚಿನ ರೈತರಿಗೆ ಅನುಕೂಲವಾಗುವಂತೆ ಸಾಲ ಮನ್ನಾ ನಿಯಮಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿದರು.

ಸಂಘದ ನಿರ್ದೇಶಕ ಎಚ್.ಕೆ. ಕರಿಸಿದ್ದಪ್ಪ ಮಾತನಾಡಿ, ಸಾಲ ಮನ್ನಾ ಮಾಡಿದೆ ಎಂದು ರೈತರು ಮನೆಯಲ್ಲಿ ಕುಳಿತರೆ ಸುಸ್ತಿದಾರರಾಗುತ್ತಾರೆ. ಆದ್ದರಿಂದ ಸಂಘಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಸಂಘದ ಮಾಜಿ ಅಧ್ಯಕ್ಷ ಎಚ್.ಬಿ. ಮೋಹನ್ ಮಾತನಾಡಿ, ಸಂಘದಿಂದ ಸಾಲ ಪಡೆದ ತಾಲ್ಲೂಕಿನ ಶೇ 90ರಷ್ಟು ರೈತರು ಒಣ ಭೂಮಿ ಹೊಂದಿದವರು. ಇವರಿಗೆ ಅನುಕೂಲವಾಘುವಂತೆ ಸಾಲ ಮನ್ನಾ ನೀತಿ ಮಾರ್ಪಡಿಸಬೇಕು ಎಂದರು.

ಬಿ.ಎಚ್. ಗೋಪಾಲಪ್ಪ, ಶಕುಂತಲಮ್ಮ, ಜಯಣ್ಣ, ನರಸಿಂಹಯ್ಯ, ರವಿ, ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.