ಗುರುವಾರ , ಜೂನ್ 17, 2021
29 °C

ಬಾರದ ಕಸದ ಗಾಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ ಸಿ.ಎಚ್‌.ಬಿ.ಎಸ್‌. ಲೇಔಟ್‌ 3ನೇ ಬಡಾವಣೆಯಲ್ಲಿ ಕೆಲವು ತಿಂಗಳುಗಳಿಂದ ಕಸದ ಗಾಡಿ ನಿರ್ದಿಷ್ಟ ವೇಳೆಗೆ ಬರುತ್ತಿಲ್ಲ. ಒಂದು ದಿನ ಬೆಳಿಗ್ಗೆ 9 ಗಂಟೆಗೆ ಬಂದರೆ, ಕೆಲವು ದಿನ ಮಧ್ಯಾಹ್ನ 1 ಗಂಟೆಯಾದರೂ ಬರುವುದಿಲ್ಲ. ಕಾಂಪೌಂಡ್‌ ಮೇಲೆ ಇಟ್ಟಿರುವ ಕಸದ ಚೀಲಗಳನ್ನು ತೆಗೆದುಕೊಂಡೂ ಹೋಗುವುದಿಲ್ಲ. ಯಾರಾದರೂ ಕಾದಿದ್ದು ಗಾಡಿಯೊಳಕ್ಕೇ ಹಾಕಬೇಕು. ಎಷ್ಟೋ ಮನೆಗಳಲ್ಲಿ ಕೆಲಸದ ನಿಮಿತ್ತ ಹೊರ ಹೋಗಿರುತ್ತಾರೆ.  ಎರಡು ಮೂರು ದಿನಗಳಾದರೂ ಕಸ ಹಾಗೆಯೇ ಉಳಿಯುತ್ತದೆ. ಕೆಲವು ದಿನ ಗಾಡಿ ಬರುವುದೇ ಇಲ್ಲ.ರಸ್ತೆ ಗುಡಿಸುವ ಪೌರ ಕಾರ್ಮಿಕರು ದುಡ್ಡು ಕೊಟ್ಟರೆ ಮಾತ್ರ ತಮ್ಮ ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತಾರೆ. ಮುಂಚೆ ಕಸದ ವ್ಯಾನ್‌ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಬಂದು. ಅವರೇ ಕಸದ ಚೀಲಗಳನ್ನೂ ಕಸದ ಬುಟ್ಟಿಗೆ ಸುರಿದುಕೊಂಡು ಹೋಗುತ್ತಿದ್ದರು. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಬಿ.ಬಿ.ಎಂ.ಪಿ. ಅಧಿಕಾರಿಗಳಲ್ಲಿ ವಿನಂತಿಸಿ ಕೊಳ್ಳುತ್ತೇನೆ.

– ಎನ್‌. ಬಸವರಾಜಯ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.