ಶುಕ್ರವಾರ, ಮೇ 14, 2021
31 °C

ಬಾರದ ಬೇಸಿಗೆ ಮಳೆ: ತೀವ್ರಗೊಂಡ ಬರದ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಬೇಸಿಗೆ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಕಾರಣ ಬರಗಾಲ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.ಜನವರಿಯಿಂದ ಏಪ್ರಿಲ್ ವರೆಗೆ ಜಿಲ್ಲೆಯಲ್ಲಿ ಆಗಬೇಕಾಗಿರುವ ಸರಾಸರಿ ಮಳೆಯಾಗಿಲ್ಲ, ಇದುವರೆಗೆ ಕೇವಲ 2.4 ಮಿಲಿಮೀಟರ್ ಮಳೆಯಾಗಿದೆ. ಇದರಿಂದ ಬಾದಾಮಿ, ಬೀಳಗಿ, ಬಾಗಲಕೋಟೆ ಮತ್ತು ಹುನಗುಂದ ತಾಲ್ಲೂಕಿನಲ್ಲಿ ಬೆಳೆಯಲಾಗಿರುವ ಶೇಂಗಾ ಬೆಳೆಗೆ ತೀವ್ರ ತೊಂದರಯಾಗಿದೆ. ಬಿತ್ತನೆ ಮಾಡಿರುವ ಶೇಂಗಾ ರೈತನ ಕೈಸೇರುವ ಸಾಧ್ಯತೆ ಇಲ್ಲವಾಗಿದೆ.ಜಿಲ್ಲೆಯಲ್ಲಿ ಜನವರಿಯಲ್ಲಿ 1.3 ಮಿ.ಮೀ, ಫೆಬ್ರುವರಿಯಲ್ಲಿ 1.7ಮಿ.ಮೀ. ಮಾರ್ಚ್‌ನಲ್ಲಿ 5.5 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಮೂರು ತಿಂಗಳಲ್ಲಿ ಒಂದೇ ಒಂದು ಹನಿ ಮಳೆಯಾಗದೇ ಇರುವುದರಿಂದ ಅಂತರ್ಜಲ ಮತ್ತಷ್ಟು ಕಳೆಗೆ ಹೋಗಿದೆ.ಇನ್ನು ಏಪ್ರಿಲ್‌ನಲ್ಲಿ 23ಮಿಲಿಮೀಟರ್ ಮಳೆಯಾಗಬೇಕಿದೆ. ಆದರೆ ಇದು ವರೆಗೆ ಕೇವಲ 2.4 ಮಿ.ಮೀ. ಮಾತ್ರ ಮಳೆಯಾಗಿದೆ. ಬೀಳಗಿಯಲ್ಲಿ 8ಮಿ.ಮೀ, ಅಮೀನಗಡದಲ್ಲಿ 30.2 ಮಿ.ಮೀ., ಸೂಳೇಬಾವಿಯಲ್ಲಿ 20 ಮಿ.ಮೀ,. ಹುನ ಗುಂದದಲ್ಲಿ 6.3 ಮಿ,ಮೀ, ಜಮಖಂಡಿಯಲ್ಲಿ 14.9 ಮಿ.ಮೀ, ಮದರ ಖಂಡಿಯಲ್ಲಿ 2.4 ಮಿ.ಮೀ, ರಬಕವಿಯಲ್ಲಿ 1ಮಿ.ಮೀ ಮಾತ್ರ ಮಳೆಯಾಗಿದೆ. ಉಳಿದಂತೆ ಬಾದಾಮಿ, ಬಾಗಲಕೋಟೆ, ಕೆರೂರ, ಲೋಕಾಪುರ ಸೇರಿದಂತೆ ಇನ್ನಿತರ ಕಡೆ ವಾರದಿಂದ ಈಚೆಗೆ ಕೇವಲ ಮೋಡ ಕವಿಯುತ್ತಿದೆ. ಆದರೆ ಮಳೆ ಬರುತ್ತಿಲ್ಲ. ಇದರಿಂದ ಧಗೆಯೂ ಹೆಚ್ಚಿದೆ.ಜಿಲ್ಲೆಯಲ್ಲಿರುವ ನದಿ, ಕೆರೆಗಳು ಸಹ ಬರಿದಾಗಿವೆ. ಕೊಳವೆ ಬಾವಿಗಳಲ್ಲಿ ಬರುತ್ತಿರವ ನೀರು ಕಡಿಮೆಯಾಗತೊಡಗಿವೆ. ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸತೊಡಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.