ಬಾರದ ವಾಹನ

ಮಂಗಳವಾರ, ಜೂಲೈ 16, 2019
24 °C

ಬಾರದ ವಾಹನ

Published:
Updated:

ಜೂನ್ 30ರಂದು ವಿದ್ಯಾರಣ್ಯಪುರಕ್ಕೆ ಹೋಗಲು ಇಸ್ರೋ ಬಡಾವಣೆ ಬಸ್ ನಿಲ್ದಾಣದಲ್ಲಿ 276/210ಎ ವಾಹನಕ್ಕಾಗಿ ಬೆಳಿಗ್ಗೆ 10.40ರಿಂದ 11.30ರವರೆಗೆ ಕಾದರೂ ಬಸ್ ಬಾರದೆ 210ಆರ್ ವಾಹನದಲ್ಲಿ ಕೆಂ.ಬ.ನಿ.ಗೆ ಹೋಗಿ ಅಲ್ಲಿಂದ ವಿದ್ಯಾರಣ್ಯಪುರಕ್ಕೆ ಹೋಗಬೇಕಾಯಿತು.ಬಸ್ ನಿಲ್ದಾಣದಲ್ಲಿ ತೂಗುಹಾಕಿರುವ ವೇಳಾಪಟ್ಟಿಯಲ್ಲಿ ಬೆಳಿಗ್ಗೆ 11.10ಕ್ಕೆ ಒಂದು ಟ್ರಿಪ್ ಇರುತ್ತದೆ. ಎರಡು ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಐದಾರು ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಈಗ ಅಪರೂಪವಾಗಿದೆ. ವಿಚಾರಿಸಲು ನಿಲ್ದಾಣದಲ್ಲಿರುವ ನಿಯಂತ್ರಕರು ಯಾವಾಗ ಲಭ್ಯವಾಗುತ್ತಾರೆಂಬುದೇ ತಿಳಿಯುವುದಿಲ್ಲ.ಕೋಟಿಗಟ್ಟಲೆ ಹಣ ಖರ್ಚು ಮಾಡಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಆದರೆ ಬಸ್‌ಗಳ ವ್ಯವಸ್ಥೆ ಮಾತ್ರ ಯಥಾಸ್ಥಿತಿಯಲ್ಲೇ ಇರುತ್ತದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ನೀಡಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry