ಬಾರ್, ನೈಟ್‌ಕ್ಲಬ್‌ಗಳಿಗೆ ನಸುಕಿನವರೆಗೆ ಅನುಮತಿ

7

ಬಾರ್, ನೈಟ್‌ಕ್ಲಬ್‌ಗಳಿಗೆ ನಸುಕಿನವರೆಗೆ ಅನುಮತಿ

Published:
Updated:

ಕೋಲ್ಕತ್ತ (ಪಿಟಿಐ): ಬಾರ್, ಪಬ್, ನೈಟ್ ಕ್ಲಬ್‌ಗಳನ್ನು ನಸುಕಿನ ಒಂದು ಗಂಟೆಯವರೆಗೆ ತೆರೆಯಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಿದೆ.ಕಳೆದ ಆರು ತಿಂಗಳ ಹಿಂದೆ ಮಧ್ಯರಾತ್ರಿ ಬಳಿಕ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಿದ ಅಬಕಾರಿ ಇಲಾಖೆ ಈಗ ನಿಯಮಕ್ಕೆ ತಿದ್ದುಪಡಿ ತಂದು ಕಠಿಣ ಷರತ್ತುಗಳು ಮೂಲಕ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಪ್ರತಿದಿನ ಹತ್ತು ಸಾವಿರ ರೂಪಾಯಿ ಪಾವತಿಸಿ ತಾತ್ಕಾಲಿಕ ಪರವಾನಗಿಯನ್ನು ಪಡೆದು ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ನಸುಕಿನ ಒಂದು ಗಂಟೆವರೆಗೆ ಮದ್ಯ ಮಾರಾಟ ಮಾಡಬಹುದು ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ರಾಜ್ಯ ಸರ್ಕಾರ ಭಾರಿ ಸಾಲದಿಂದ ತತ್ತರಿಸಿದ್ದು, ಅದನ್ನು ನಿವಾರಿಸಿಕೊಳ್ಳುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry