ಸೋಮವಾರ, ಜೂನ್ 21, 2021
30 °C

ಬಾಲಕನ ಕಾಲಿನ ಮೇಲೆ ಹರಿದ ಬಿಎಂಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಗಡಿ ರಸ್ತೆಯ ಜೈಮುನಿರಾವ್‌ ವೃತ್ತದ ಬಳಿ ಭಾನು­ವಾರ ಮಧ್ಯಾಹ್ನ ಜೀವನ್‌ ಎಂಬ ಆರು ವರ್ಷದ ಬಾಲಕನ ಕಾಲಿನ ಮೇಲೆ ಬಿಎಂಟಿಸಿ ಬಸ್ ಹರಿದಿದೆ.ಜೀವನ್‌, ಮಾಗಡಿ ಕಾರ್ಡ್‌ ಬಡ­ವಾಣೆಯ ನಿವಾಸಿ ಮಂಜುನಾಥ್‌ ಎಂಬುವರ ಮಗ. ಮಧ್ಯಾಹ್ನ 1.30ರ ಸುಮಾರಿಗೆ ಕುಟುಂಬ ಸದಸ್ಯರು ಹೋಟೆಲ್‌ಗೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ದಾಸರ­ಹಳ್ಳಿ– ಸಿಟಿ ಮಾರುಕಟ್ಟೆ ಮಾರ್ಗದ ಬಿಎಂ­ಟಿಸಿ ಬಸ್‌ ಜೀವನ್‌ಗೆ ಡಿಕ್ಕಿ ಹೊಡೆ­ಯಿತು. ಕೆಳಗೆ ಬಿದ್ದ ಆತ ಬಸ್‌ನ ಚಕ್ರದ ಬಳಿ ಉರುಳಿದ್ದಾನೆ. ಆಗ ಹಿಂದಿನ ಚಕ್ರ ಜೀವನ್‌ನ ಬಲಗಾಲಿನ ಮೇಲೆ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ.ಗಾಯಗೊಂಡ ಜೀವನ್‌ನನ್ನು ಕೂಡಲೇ ಸಮೀಪದ ಗಾಯಿತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲ­ಕನ ಬಲತೊಡೆಯ ಮೂಳೆ ಮುರಿ­ದಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ವೈದ್ಯರ ಸೂಚನೆಯಂತೆ ವಿಕ್ಟೋರಿ­ಯಾಗೆ ವರ್ಗಾಯಿಸ­ಲಾಯಿತು. ಘಟನೆ ಸಂಬಂಧ ಬಿಎಂಟಿಸಿ ಬಸ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಜಯನಗರ ಸಂಚಾರ ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.