ಶುಕ್ರವಾರ, ಮೇ 14, 2021
31 °C

ಬಾಲಕನ ಕೊಲೆಗೈದಿದ್ದ ನಿವೃತ್ತ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್ಎಸ್): ತನ್ನ ಮನೆಯ ಆವರಣದಲ್ಲಿ ಬಾದಾಮಿ ಕಾಯಿ ಕೀಳಲು ಬಂದ ಕೆ.ದಿಲ್ಶನ್  ಎಂಬ 13 ವಯಸ್ಸಿನ ಬಾಲಕನನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ ನಿವೃತ್ತ ಸೇನಾಧಿಕಾರಿ ಕೆ.ರಾಮರಾಜ್ ಅವರಿಗೆ ತ್ವರಿತ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

 
ಇದರ ಜತೆಯಲ್ಲಿ 50 ವಯಸ್ಸಿನ ರಾಮರಾಜ್ ಅವರಿಗೆ ನ್ಯಾಯಾಲಯ 60 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ದಂಡದ ಮೊತ್ತವನ್ನು ಮೃತ ಬಾಲಕನ ಕುಟುಂಬಕ್ಕೆ ನೀಡಬೇಕೆಂದು ಆದೇಶಿಸಿದೆ.
ತೀರ್ಪು ಹೊರಬೀಳುತ್ತಿದ್ದಂತೆ ದಿಲ್ಶನ್ ತಾಯಿ ಕೆ. ಕಲೈವಾಣಿ ಪ್ರತಿಕ್ರಿಯಿಸಿ ~ನನಗೆ ಸಂತಸವಾಗಿದೆ. ಇದು ಒಂದು ಉತ್ತಮ ತೀರ್ಪು. ಪ್ರತಿಯೊಬ್ಬರಿಗೂ ಈ ತೀರ್ಪು ಪಾಠವಾಗಲಿದೆ. ಇಂಥ ಘಟನೆಗಳು ಜಗತ್ತಿನಲ್ಲಿ ಎಲ್ಲಿಯೂ ಯಾರೊಬ್ಬರಿಗೂ ಆಗದಿರಲಿ~ ಎಂದು ತಿಳಿಸಿದ್ದಾರೆ.

 
ಘಟನೆ ನಡೆದ ಒಂದೇ ವಾರದಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ಬೇಧಿಸಿದ್ದರು. ಬಾದಾಮಿಯನ್ನು ಕೀಳಲು ತನ್ನ ಮನೆಯ ಆವರಣ ಪ್ರವೇಶಿಸುತ್ತಿದ್ದ ಬಾಲಕ ವರ್ತನೆ ನಿವೃತ್ತ ಸೇನಾಧಿಕಾರಿಯ ನೆಮ್ಮದಿ ಕೆಡಿಸಿತ್ತು.ಹೀಗಾಗಿ ಜುಲೈ 4ರಂದು ದಿಲ್ಶನ್ ಹಾಗೂ ಆತನ ಸ್ನೇಹಿತರು ತನ್ನ ಮನೆಯ ಆವರಣ ಪ್ರವೇಶಿಸುತ್ತಿದ್ದಂತೆ ರಾಮರಾಜ್ ತಮ್ಮ ಮನೆಯ ಮಹಡಿಯ ಮೇಲೆ ನಿಂತು ದಿಲ್ಶನ್ ನತ್ತ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ದಿಲ್ಶನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದನು.
ಪ್ರಕರಣಕ್ಕೆ ಸಂಬಂಧಿಸಿದಂತೆ 55 ಸಾಕ್ಷಿಗಳ ಸಾಕ್ಷ್ಯವನ್ನು ದಾಖಲಿಸಿಕೊಳ್ಳಲಾಗಿತ್ತು. ಏ. 11ರಂದು ವಿಚಾರಣೆ ಕೊನೆಗೊಂಡಿತ್ತು.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಮರಾಜ್ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಅವರೆಲ್ಲರೂ ಭಾರತೀಯ ಸೇನೆಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.