ಮಂಗಳವಾರ, ಮೇ 11, 2021
27 °C

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲಹಾಬಾದ್ (ಪಿಟಿಐ): ಇಲ್ಲಿನ ಬಾಲ ಮಂದಿರದ (ಬಾಲಾಪರಾಧಿಗಳ ಪಾಲನಾ ಗೃಹ) ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಯಾದ ಈ  ಮಂದಿರದ ಸಹಾಯಕನನ್ನು ಬಂಧಿಸಲಾಗಿದೆ ಹಾಗೂ ಮೇಲ್ವಿಚಾರಕಿಯನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.10 ವರ್ಷ ವಯಸ್ಸಿನೊಳಗಿನ ಕನಿಷ್ಠ ಮೂವರು ಬಾಲಕಿಯರ ಮೇಲೆ ಈ ಹೇಯ ಕೃತ್ಯ ಎಸಗಿರುವ ಆರೋಪಿ ವಿಷ್ಣುಭೂಷಣ್ ಓಜಾನನ್ನು (52) ಗುರುವಾರ ರಾತ್ರಿ ಬಂಧಿಸಲಾಗಿದೆ.  ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.ಈ ಬಾಲ ಮಂದಿರದಲ್ಲಿದ್ದ ಆರು ವರ್ಷದ ಹೆಣ್ಣು ಮಗುವೊಂದನ್ನು ಇದೇ ಪಟ್ಟಣದಲ್ಲಿ ವಾಸಿಸುವ ದಂಪತಿ ಇತ್ತೀಚೆಗೆ ದತ್ತು ತೆಗೆದುಕೊಂಡಿದ್ದರು. ಈ ಮಗು ಬಾಲಮಂದಿರದ ಆಗುಹೋಗುಗಳನ್ನು ಹೇಳುತ್ತಿದ್ದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.ಮಗು ಹೇಳಿದ ವಿವರಗಳನ್ನು ಕೇಳಿ ದಿಗ್ಭ್ರಾಂತರಾದ ದಂಪತಿ, ಬಾಲ ಮಂದಿರದ ಮೇಲ್ವಿಚಾರಕಿ ಊರ್ಮಿಳಾ ಗುಪ್ತಾ ಅವರಿಗೆ ವಿಷಯ ತಿಳಿಸಿದರು. ನಂತರ ಊರ್ಮಿಳಾ ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರು. ತದನಂತರ ಪೊಲೀಸರು ಬಿಹಾರ ಮೂಲದ ಆರೋಪಿ ವಿಷ್ಣುಭೂಷಣ್ ಓಜಾನನ್ನು ಬಂಧಿಸಿದರು.ಓಜಾ ತಪ್ಪೊಪ್ಪಿಗೆ ನೀಡಿದ ತರುವಾಯ ಪೊಲೀಸರು ಕೌರ್ಯಕ್ಕೆ ಒಳಗಾದ ಮೂವರು ಬಾಲಕಿಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವರದಿ ದೃಢಪಡಿಸಿದೆ.ಈ ಮಧ್ಯೆ, ಜಿಲ್ಲಾ ಆಡಳಿತ ಕರ್ತವ್ಯ ನಿರ್ಲಕ್ಷ್ಯದ ಆಪಾದನೆ ಮೇಲೆ ಬಾಲ ಮಂದಿರದ ಮೇಲ್ವಿಚಾರಿಕಿ ಊರ್ಮಿಳಾ ಗುಪ್ತಾ ಅವರನ್ನು ಅಮಾನತು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.