ಭಾನುವಾರ, ಮಾರ್ಚ್ 7, 2021
29 °C

ಬಾಲಕಿಯರ ಶಿಕ್ಷಣಕ್ಕಾಗಿ ಆಭರಣ ವಿನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಕಿಯರ ಶಿಕ್ಷಣಕ್ಕಾಗಿ ಆಭರಣ ವಿನ್ಯಾಸ

ನಿರ್ಗತಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶದಿಂದ ‘ಆಭರಣ’ ಜ್ಯುವೆಲ್ಲರ್ಸ್‌ ನಾನ್ಹಿ ಕಲಿ ಹಾಗೂ ಜೆಮ್‌ಫೀಲ್ಡ್‌ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ  ‘ಪ್ರಾಜೆಕ್ಟ್‌ ಬ್ಲಾಸಮಿಂಗ್‌’ ಕಾರ್ಯಕ್ರಮದ ಸಹಾಯಾರ್ಥ ವಿನ್ಯಾಸಗೊಳಿಸಲಾಗಿರುವ ವಿಶೇಷ ಒಡವೆಗಳನ್ನು ಗರುಡಾ ಮಾಲ್‌ ಬಳಿಯ ಆಭರಣ ಜ್ಯುವೆಲ್ಲರ್ಸ್‌ನ ಮಳಿಗೆಯಲ್ಲಿ ಶುಕ್ರವಾರ ಪ್ರದರ್ಶಿಸಲಾಯಿತು.ಪ್ರಾಜೆಕ್ಟ್‌ ಬ್ಲಾಸಮಿಂಗ್‌ಗೆ ದೇಶದೆಲ್ಲೆಡೆಯಿಂದ ಆಯ್ಕೆಯಾಗಿರುವ ಒಂಬತ್ತು ಒಡವೆ ಬ್ರಾಂಡ್‌ಗಳ ಪೈಕಿ ‘ಆಭರಣ’ ರಾಜ್ಯದ ಏಕೈಕ ಬ್ರಾಂಡ್‌ ಆಗಿದ್ದು, ಈ ವಿಶೇಷ ವಿನ್ಯಾಸದ ಒಡವೆಗಳ ಮಾರಾಟದಿಂದ ಬಂದ ಮೊತ್ತವನ್ನು ಪ್ರಾಜೆಕ್ಟ್‌ ಬ್ಲಾಸಮಿಂಗ್‌ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಜಮಾ ಮಾಡಲಾಗುವುದು ಎಂದು ‘ಆಭರಣ’ದ ಕಾರ್ಯನಿರ್ವಾಹಕ ಅಧಿಕಾರಿ ಪ್ರತಾಪ್‌ ಕಾಮತ್‌ ಹೇಳಿದರು.ನಾಂದಿ ಫೌಂಡೇಷನ್‌ನ ಶೈಕ್ಷಣಿಕ ಸಂಶೋಧನೆ ಮತ್ತು ಕಲಿಕೆ ವಿಭಾಗದ  ಮುಖ್ಯಸ್ಥೆ ಡಾ. ಪ್ರೀತಾ ಭಕ್ತಾ ಹಾಗೂ  ಜೆಮ್‌ಫೀಲ್ಡ್ಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಅನ್ವೇಶಾ ದತ್ತಾ ಅವರು ಯೋಜನೆಯ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸದೃಢರಾಗಿಸುವ ಅವಕಾಶ ಸಿಕ್ಕಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.