ಬಾಲಕಿ ಅತ್ಯಾಚಾರ ಆರೋಪಿ ಸೆರೆ

7

ಬಾಲಕಿ ಅತ್ಯಾಚಾರ ಆರೋಪಿ ಸೆರೆ

Published:
Updated:

ತಿಪಟೂರು: ಸುಮಾರು ಐದು ವರ್ಷದ ಹಿಂದೆ ತನ್ನ ಮೇಲೆ ಅತ್ಯಾಚಾರ ಎಸಗಿ ಹೆಣ್ಣು ಮಗುವಿನ ಜನನಕ್ಕೆ ಕಾರಣವಾಗಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಹುಣಸೇಘಟ್ಟದ ಜ್ಯೋತಿ ಎಂಬುವರು ನೀಡಿದ್ದ ದೂರಿನ ಸಂಬಂಧ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ.ಆರೋಪಿ ರವೀಶನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಗ್ರಾಮಾಂತರ ಸಿಪಿಐ ಎ.ಕೆ.ತಿಮ್ಮಯ್ಯ ತಿಳಿಸಿದ್ದಾರೆ.ಐದು ವರ್ಷದ ಹಿಂದೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ರವೀಶನಿಂದ ಜನಿಸಿದ ಹೆಣ್ಣು ಮಗು ತನಗಿದೆ ಎಂದು ಜ್ಯೋತಿ ದೂರು ನೀಡಿರುವುದರಿಂದ ಈ ಪ್ರಕರಣ ಕುತೂಹಲ ಕೆರಳಿಸಿದೆ. ಈಕೆಯನ್ನು ಈಗ ಕೈಹಿಡಿದಿರುವ ಸೂರ್ಯಪ್ರಕಾಶ್ ಪತ್ನಿ ನೆರವಿಗೆ ನಿಂತಿದ್ದಾರೆ.ಎಷ್ಟೋ ಅಸಹಾಯಕ ಹೆಣ್ಣು ಮಕ್ಕಳು ದೌರ್ಜನ್ಯ ಸಹಿಸಿಕೊಂಡು ಸುಮ್ಮನಿರುವುದರಿಂದ ಅಂಥ ಘಟನೆಗಳು ಬಯಲಿಗೆ ಬಾರದೆ ಉಳಿಯುತ್ತವೆ. ತಪ್ಪಿತಸ್ಥರು ಪಾರಾಗುತ್ತಲೇ ಇರುತ್ತಾರೆ. ಅಂಥವರಿಗೆ ಸಂದೇಶ ರವಾನಿಸುವ ಹಠ ಮತ್ತು ವೈಯಕ್ತಿಕವಾಗಿ ನೋವುಕೊಟ್ವ್ಯಕ್ತಿಯನ್ನುತಡವಾಗಿಯಾದರೂ ಶಿಕ್ಷೆಗೆ ಗುರಿ ಪಡಿಸಬೇಕು ಎಂಬ ಉದ್ದೇಶದಿಂದ ತನ್ನ ಪತ್ನಿ ಜ್ಯೋತಿ ಈ ಪ್ರಕರಣ ದಾಖಲಿಸಿದ್ದಾರೆ ಎಂದು ಸೂರ್ಯಪ್ರಕಾಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry