ಶುಕ್ರವಾರ, ನವೆಂಬರ್ 22, 2019
20 °C

ಬಾಲಕಿ ಚೇತರಿಕೆಗೆ ಸರ್ವ ಪಕ್ಷಗಳ ನಾಯಕರ ಪ್ರಾರ್ಥನೆ

Published:
Updated:

ನಾಗಪುರ (ಪಿಟಿಐ): ಮಧ್ಯಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಐದು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದರೆ, ಇತ್ತ ನಾಗಪುರದಲ್ಲಿ ರಾಜಕೀಯ ಪಕ್ಷಗಳು ಪಕ್ಷ ಭೇದ ಮರೆತು ಆ ಬಾಲಕಿಯು ಶೀಘ್ರ ಗುಣಮಖವಾಗಲೆಂದು ಒಗ್ಗಟ್ಟಿನಿಂದ ಪ್ರಾರ್ಥಿಸುತ್ತಿದ್ದಾರೆ.ದೆಹಲಿಯಲ್ಲಿ ನಡೆದ ಇಂಥದ್ದೇ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿ ಮತ್ತು ಎಂಎನ್‌ಎಸ್ ನಾಯಕರು, ಇಂಥ ಘಟನೆಗಳು ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಇಲ್ಲಿನ ಸಿತಾಬುಲ್ಡಿ ಪ್ರದೇಶದಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಬುಧವಾರ ಸಂಜೆ ಸಭೆ ಸೇರಿದ ಸರ್ವ ಪಕ್ಷಗಳ ನಾಯಕರು, ಘಟನೆ ವಿರುದ್ಧ ಪ್ರತಿಭಟನೆ ನಡೆಸಿದರು. ಬಾಲಕಿಯು ಶೀಘ್ರ ಗುಣಮುಖಳಾಗಲಿ ಎಂದು ಪ್ರಾರ್ಥಿಸಿದರು.

ಪ್ರತಿಕ್ರಿಯಿಸಿ (+)