ಬಾಲಕಿ ಮೇಲೆ ಅತ್ಯಾಚಾರ-ಕೊಲೆ: ಇಬ್ಬರ ಬಂಧನ

7

ಬಾಲಕಿ ಮೇಲೆ ಅತ್ಯಾಚಾರ-ಕೊಲೆ: ಇಬ್ಬರ ಬಂಧನ

Published:
Updated:
ಬಾಲಕಿ ಮೇಲೆ ಅತ್ಯಾಚಾರ-ಕೊಲೆ: ಇಬ್ಬರ ಬಂಧನ

ಆಲಮೇಲ (ವಿಜಾಪುರ ಜಿಲ್ಲೆ):  ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಇಲ್ಲಿಗೆ ಸಮೀಪದ ಬ್ಯಾಡಗಿಹಾಳ ಗ್ರಾಮದಲ್ಲಿ ಇದೇ 9ರಂದು ನಾಪತ್ತೆಯಾಗಿದ್ದ ಬಾಲಕಿಯ ಶವ 11ರಂದು ಬಾವಿಯಲ್ಲಿ ಪತ್ತೆಯಾಗಿತ್ತು. ಮೊದಲು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ಸಂಶಯದ ಮೇಲೆ ಪ್ರವೀಣ ಆಸಂಗಿಹಾಳ ಮತ್ತು ಜಕ್ಕಪ್ಪ ವಾಲೀಕಾರ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗಿ ದುಷ್ಕತ್ಯದ ಬಗ್ಗೆ ಬಾಯಿ ಬಿಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿಯನ್ನು ಹೊಲದ ದಾರಿಯಲ್ಲಿ ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ ಮುಖ್ಯ ಆರೋಪಿ ಪ್ರವೀಣ,  ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜಕ್ಕಪ್ಪನನ್ನೂ ಕರೆದ. ನಂತರ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಂದು ಶವವನ್ನು ಬಾವಿಗೆ ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಜ್ಜಿಯ ಊರಾದ ಬ್ಯಾಡಗಿಹಾಳ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ ರಜಾ ದಿನಗಳಲ್ಲಿ ತನ್ನ ಸ್ವಂತ ಊರು ಮದನಹಳ್ಳಿಗೆ ಕಾಲುದಾರಿಯಲ್ಲಿ ಹೋಗುವಾಗ ಈ ಇಬ್ಬರೂ ದುಷ್ಕೃತ್ಯವೆಸಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry