ಬಾಲಕಿ ಮೇಲೆ ಅತ್ಯಾಚಾರ: ಬಂಧನ

7

ಬಾಲಕಿ ಮೇಲೆ ಅತ್ಯಾಚಾರ: ಬಂಧನ

Published:
Updated:

ಕಾರವಾರ: ಬಾಲಕಿಯನ್ನು ಪುಸಲಾ­ಯಿಸಿ ವಸತಿಗೃಹವೊಂದಕ್ಕೆ ಕರೆದು­ಕೊಂಡು ಹೋಗಿ ಅತ್ಯಾಚಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಗುರು­ವಾರ ಬಂಧಿಸಿದ್ದಾರೆ.ಹೊನ್ನಾವರ ತಾಲ್ಲೂಕಿನ ಅಳ್ಳಂಕಿಯ ನಾಗರಾಜ ಹೆಗಡೆ ಎಂಬಾತನನ್ನು ಬಂಧಿಸಲಾಗಿದೆ. ಬಾಲಕಿ ನಾಪತ್ತೆಯಾದ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ, ಬಾಲಕಿಯು ಅಂಕೋಲಾ ತಾಲ್ಲೂಕಿನ ವಸತಿಗೃಹವೊಂದರಲ್ಲಿ ಇರುವುದು ಪತ್ತೆಯಾಯಿತು.ನಾಗರಾಜ ಹೆಗಡೆ ಪುಸಲಾಯಿಸಿ ಅಂಕೋಲಾಕ್ಕೆ ಕರೆದುಕೊಂಡು ಬಂದು, ವಸತಿಗೃಹದಲ್ಲಿ ಅತ್ಯಾಚಾರ ಮಾಡಿ­ದ್ದಾನೆಂದು ಬಾಲಕಿಯು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಯನ್ನು ಬಂಧಿಸಿ ನ್ಯಾಯಾ­ಲಯಕ್ಕೆ ಹಾಜರು­ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry