ಭಾನುವಾರ, ನವೆಂಬರ್ 17, 2019
29 °C

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಬಂಧನ

Published:
Updated:

ವಿಜಾಪುರ: ಇಂಡಿ ತಾಲ್ಲೂಕು ಹಿರೇರೂಗಿ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಅದೇ ಗ್ರಾಮದ ಆರೋಪಿ ಆಕಾಶ ಪರಶುರಾಮ ನಿಡೋಣಿ ಉರ್ಫ್ ಹೊಸಮನಿ (19) ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಜಯ್ ಹಿಲೋರಿ ತಿಳಿಸಿದ್ದಾರೆ.ಜೂನ್ 4ರಂದು ಸಂಜೆ ತನ್ನ ತಾಯಿಯೊಂದಿಗೆ ಬಾಲಕಿ ಹಿಟ್ಟಿನ ಗಿರಣಿಗೆ ಹೋಗಿದ್ದಳು. ಅಲ್ಲಿಂದ ಬಹಿರ್ದೆಸೆಗೆ ಹೋದಾಗ ಈತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ಅವರು ಹೇಳಿದ್ದಾರೆ.ಆರೋಪಿ  ಪತ್ತೆಗಾಗಿ ಇಂಡಿ ಸಿಪಿಐ ಆರ್.ಯು. ಯಲಿಗಾರ, ಪಿಎಸ್‌ಐ ಐ.ಆರ್. ಪಟ್ಟಣಶೆಟ್ಟಿ ಹಾಗೂ ಸಿಬ್ಬಂದಿಯ ತನಿಖಾ ತಂಡ ರಚಿಸಲಾಗಿತ್ತು. ಆರೋಪಿ ಬುಧವಾರ ವಿಜಾಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸೆರೆ ಸಿಕ್ಕಿದ್ದು, ಈ ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರೋಪಿ ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.ಬಂಧನ:  ಸತ್ಕಾರ ವಸತಿಗೃಹದ ಮೇಲೆ ದಾಳಿ ನಡೆಸಿ, ಅಲ್ಲಿ ಅನೈತಿತ ಚಟುವಟಿಕೆಯಲ್ಲಿ ತೊಡಗಿದ್ದ ಟಕ್ಕಳಕಿ ತಾಂಡಾ 1ರ ನಿವಾಸಿ ರೂಪಸಿಂಗ್ ಭೀಮು ರಾಠೋಡ (40), ಸರಾಫ್ ಬಜಾರ್ ಹತ್ತಿರದ ನಿವಾಸಿ ಅಪ್ಪಾಸಾಹೇಬ ತವಣಪ್ಪ ಮುತ್ತಿನ ಹಾಗೂ ಅವರಿಗೆ ಕೊಠಡಿ ನೀಡಿ ಸಹಕರಿಸಿದ ವಸತಿ ಗೃಹದ ವ್ಯವಸ್ಥಾಪಕ ಇಸ್ಮಾಯಿಲ್‌ಸಾಬ್ ಅಬ್ದುಲ್‌ಸತ್ತಾರ ಇಂಡಿ (51) ಎಂಬುವರನ್ನು ಬಂಧಿಸಲಾಗಿದೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)