ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

7

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Published:
Updated:

ಮುಜಾಫರ್‌ನಗರ (ಪಿಟಿಐ): 14ವರ್ಷದ ಬಾಲಕಿ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಶಾಮ್ಲಿ ಜಿಲ್ಲೆಯ ಬಿಂತು ಗ್ರಾಮದಲ್ಲಿ ಸೋಮವಾರ ನಡೆದಿದೆ.ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಹೋದ ಯುವಕರ ಗುಂಪು ಈ ಕೃತ್ಯವನ್ನು ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.ಉಜ್ಜೈನಿ ವರದಿ: ಇಲ್ಲಿನ ಘೋಸ್ಲಾ ಗ್ರಾಮದಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಹೇರಲಾಗಿದೆ.ಬಾಲಕಿಯು ಶಾಲೆಯಿಂದ ಮರಳುತ್ತಿದ್ದಾಗ ಇನ್ನೊಂದು ಕೋಮಿನ ಐವರು ಬಾಲಕರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಬಾಲಕಿ ಕಿರುಚಿದಾಗ ಗ್ರಾಮಸ್ಥರು ಓಡಿಬಂದು ಆಕೆಯನ್ನು ರಕ್ಷಿಸಿದರು ಎಂದು ಮಧ್ಯಪ್ರದೇಶ ಡಿಐಜಿ ಶ್ರೀನಿವಾಸ್ ವರ್ಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry