ಸೋಮವಾರ, ಜೂನ್ 21, 2021
21 °C

ಬಾಲಕಿ ವಿವಾಹ ತಡೆದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಮಸ್ಕಿ ಚಿಕ್ಕಸವದತ್ತಿ ಯಲ್ಲಮ್ಮ ದೇವಸ್ಥಾನದ 10ನೇ  ವಾರ್ಷಿಕೋತ್ಸ­ವದ ಅಂಗವಾಗಿ ಶುಕ್ರವಾರ ಏರ್ಪಡಿ­ಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬಾಲಕಿ ಮದುವೆ ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ­ಗಳು ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಮದುವೆ­ಯಾಗಲು 11 ಜೋಡಿಗಳು ನೋಂದಣಿ ಮಾಡಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಲಿಂಗಸುಗೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರಾಜೇಶ್ವರಿ, ಮಲ್ಲಮ್ಮ ಎಚ್‌. ಸುಜಾತ ಬಾಳೇ­ಕಾಯಿ, ಸಿಪಿಐ ಸತ್ಯನಾರಾಯಣ ರಾವ್‌, ಪಿಎಸ್‌ಐ ಗುರುರಾಜ ಕಟ್ಟಿ­ಮನಿ ಸೇರಿದಂತೆ ಹಲವು ಅಧಿಕಾರಿ­ಗಳು ವಧು–ವರರ ದಾಖಲೆಗಳ ಪರೀಶಿಲನೆ  ಸಂದರ್ಭದಲ್ಲಿ ಬಾಲಕಿಗೆ ಮದುವೆ ನಡೆಯುತ್ತಿರುವುದು ಬೆಳಕಿಗೆ ಬಂತು.ದೇವಸ್ಥಾನದ ಸಂಘಟಕರು ಮತ್ತು ಅಧಿಕಾರಿಗಳು ಕೂಡಲೇ ಮದುವೆ ವೇದಿಕೆಯಲ್ಲಿ ಕುಳಿತಿದ್ದ  ಆ ಜೋಡಿಯನ್ನು ಅಲ್ಲಿಂದ ವಾಪಸ್‌ ಕಳಿಸುವ ಮೂಲಕ ಬಾಲ್ಯ ವಿವಾಹ ತಡೆದರು. 10 ಜೋಡಿಗಳಿಗೆ ಮಾತ್ರ ಸಾಮೂಹಿಕ ವಿವಾಹದಲ್ಲಿ ಮದುವೆ­ಯಾಗಲು ಅನುಮತಿ ನೀಡಲಾ­ಯಿತು.ಪಲ್ಲಕ್ಕಿ ಸೇವೆ: ಚಿಕ್ಕಸವದತ್ತಿ  ಯಲ್ಲಮ್ಮ­ದೇವಿ ಜಾತ್ರೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಗಂಗಾಸ್ಥಳದಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಭಾಗವಹಿ­ಸಿದ್ದರು. ಡೊಳ್ಳು ಕುಣಿತ ಸೇರಿದಂತೆ ವಿವಿದ ವಾದ್ಯಗಳು ನಡೆದವು. ಚಿಕ್ಕಸವದತ್ತಿ ಪಾರ್ವತಮ್ಮ ನೇತೃತ್ವದಲ್ಲಿ ನಡೆದ ಜಾತ್ರಾ ಸಮಾ­ರಂಭದಲ್ಲಿ ಅನೇಕ ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.