ಮಂಗಳವಾರ, ಜೂನ್ 22, 2021
27 °C

ಬಾಲಗಂಗಾಧರನಾಥ ಸ್ವಾಮೀಜಿ ಅದ್ದೂರಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಯುವಕರು ಸಂಸ್ಕಾರವಂತ­ರಾದಾಗ ಮಾತ್ರ ಸಮುದಾಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಮಳ್ಳೂರು ಗ್ರಾಮದ ನಾಗಲ­ದೇವಿ ಭವನದಲ್ಲಿ ಭಾನುವಾರ ಮಳ್ಳೂರು ಒಕ್ಕಲಿಗ ಯುವಸೇನೆ, ಒಕ್ಕಲಿ­ಗರ ಸಂಘದ ವತಿಯಿಂದ ನಡೆದ ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮೀಜಿ ಉತ್ಸವ ಹಾಗೂ ಶಾಶ್ವತ ನೀರಾವರಿ ಹಕ್ಕೊತ್ತಾಯ ಸಮಾರಂಭ­ದಲ್ಲಿ ಅವರು ಮಾತನಾಡಿದರು.ಮಾನವಶಕ್ತಿ ರಚನಾತ್ಮಕವಾಗಿ ಬಳಕೆ­ಯಾಗ­ಬೇಕಾದರೆ ಇಂದ್ರಿಯ­ಗಳನ್ನು ಹತೋಟಿ­ಯಲ್ಲಿಟ್ಟುಕೊಳ್ಳಬೇಕು. ಮಕ್ಕಳು ಸರಿದಾರಿಯಲ್ಲಿ ಸಾಗಲು ಪೋಷ­ಕರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾದದ್ದು. ಎಳೆ ವಯಸ್ಸಿ­ನಲ್ಲಿಯೇ ಸರಿ ದಾರಿಯತ್ತ ಸಾಗಲು ಪ್ರೇರಣೆ ಮುಖ್ಯ ಎಂದು ಹೇಳಿದರು.ಬರಪೀಡಿತ ಜಿಲ್ಲೆಗಳಿಗೆ ನೀರು ಬೇಕು ಎಂಬ ಹಲ ವರ್ಷಗಳ ಹೋರಾಟದ ಫಲವಾಗಿ ಈಗ ಸರ್ಕಾರ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಮುಂದಾ­ಗಿದೆ. ಹೋರಾಟ ಹೀಗೇ ಮುಂದುವರಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸರ್ಕಾರದ ಕಣ್ಣು ತೆರೆಸಬೇಕು. ಕೇವಲ ಕುಡಿಯಲಷ್ಟೇ ಅಲ್ಲದೆ ಅಂತರ್ಜಲ ವೃದ್ಧಿ ಮತ್ತು ಕೃಷಿಗೆ ನೀರು ಅತ್ಯವಶ್ಯಕವಾಗಿದೆ. ಇದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕುತ್ತದೆ ಮತ್ತು ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಹೇಳಿದರು.ಗ್ರಾಮದಲ್ಲಿ ಆದಿಚುಂಚನಗಿರಿ ಬಾಲ­ಗಂಗಾಧರನಾಥ ಸ್ವಾಮೀಜಿ ಹಾಗೂ ಕೆಂಪೇಗೌಡರ ಪುತ್ಥಳಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ವರದನಾಯಕನ ಹಳ್ಳಿಯ ಈಧರೆ ಕಲಾತಂಡದ ಡೊಳ್ಳುಕುಣಿತ, ಮಂಗಳ­ವಾದ್ಯಗಳು ಪಾಲ್ಗೊಂಡಿದ್ದವು.ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ­ರಾದ ಯಲುವಹಳ್ಳಿ ಎನ್‌.ರಮೇಶ್‌, ವಿ.ಇ.ರಾಮಚಂದ್ರ, ಎಂ.ಎಲ್‌.ಸತೀಶ್‌, ಮಳ್ಳೂರು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಎಚ್‌.ನಾರಾಯಣಸ್ವಾಮಿ, ತಾಲ್ಲೂಕು ಒಕ್ಕಲಿಗರ ಯುವ ಘಟಕದ ಅಧ್ಯಕ್ಷ ಜೆ.ವೆಂಕಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮಳ್ಳೂರು ಹರೀಶ್‌, ನವೀನ್‌, ಎಂ.ಹರೀಶ್‌, ದರ್ಶನ್‌ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.