ಮಂಗಳವಾರ, ಏಪ್ರಿಲ್ 13, 2021
25 °C

ಬಾಲವಿಜ್ಞಾನಿಗಳ ದೊಡ್ಡ ಸಾಧನೆ..!

ಪ್ರಜಾವಾಣಿ ವಾರ್ತೆ/ ಶ್ರೀಪಾದ ಯರೇಕುಪ್ಪಿ Updated:

ಅಕ್ಷರ ಗಾತ್ರ : | |

ಬೆಳಗಾವಿ: ಚಿಮ್ಮುತ್ತಿರುವ ಜ್ವಾಲಾಮುಖಿ... ಜಲಾ ಶಯ... ಪವನ ವಿದ್ಯುತ್ ಉತ್ಪಾದನೆ... ಹನಿ ನೀರಾವರಿ... ವಾಯು ಮತ್ತು ಜಲ ಮಾಲಿನ್ಯ... ಬಾಲ ವಿಜ್ಞಾನಿಗಳು ತಯಾರಿಸಿದ್ದ ಹಲವಾರು ವಿಜ್ಞಾನ ಮಾದರಿಗಳು ಆಕರ್ಷಿಸಿದವು. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಂಥ ಖುಷಿ ಬಾಲಕಿಯ ರಲ್ಲಿ ಎದ್ದು ಕಾಣುತ್ತಿತ್ತು.

ಪ್ರದರ್ಶನ ವೀಕ್ಷಣೆಗೆ ಬಂದವರಿಗೆ ತಮ್ಮ ಮಾದರಿಯ ಮಾಹಿತಿಯನ್ನು ಪಟಪಟನೆ ವಿವರಿಸುತ್ತಿದ್ದ ಬಾಲಕಿಯರು ವಿಜ್ಞಾನಿ ಗಳಂತೆ ಕಂಡು ಬಂದರು.  ಇದು ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡುಬಂದ ದೃಶ್ಯ.ಶಾಲೆಯ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇದೇ ಶಾಲೆಯ 170 ವಿದ್ಯಾ ರ್ಥಿನಿಯರು 65 ಮಾದರಿಗಳನ್ನು ತಯಾರಿಸಿದ್ದರು. ವಸ್ತುಪ್ರದರ್ಶನದಲ್ಲಿ ಇತರೆ ಶಾಲೆಗಳ ಮಕ್ಕಳು ಭಾಗವಹಿಸಿರಲಿಲ್ಲ, ಆದರೆ ಪ್ರದರ್ಶನದ ವೀಕ್ಷಣೆಗೆ ನಗರದ ಬಹುತೇಕ ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿದ್ದರು.ಪವನ ವಿದ್ಯುತ್ ಉತ್ಪಾದನೆ, ಹನಿ ನೀರಾವರಿ ಪದ್ಧತಿ, ಮಾನವನ ವಿಕಾಸ, ಜಲಾಶಯದ ಉಪ ಯೋಗ, ಟ್ರಾಫಿಕ್ ಸಿಗ್ನಲ್ಸ್, ವಾಯು ಮತ್ತು ಜಲ ಮಾಲಿನ್ಯ, ನ್ಯೂಟನ್ ಚಕ್ರ, ಜ್ವಾಲಾಮುಖಿ, ಕಸ ದಿಂದ ವಿದ್ಯುತ್ ಉತ್ಪಾದನೆ, ಕಿರು ಜಲ ವಿದ್ಯುತ್‌ಶಕ್ತಿ ಉತ್ಪಾದನೆ ಮಾದರಿಗಳು ಎಲ್ಲರನ್ನೂ ಆಕರ್ಷಿ ಸಿದವು. ತಾವು ತಯಾರಿಸಿದ ಮಾದರಿಗಳ ಮಾಹಿತಿ ಯನ್ನು ವಿದ್ಯಾರ್ಥಿನಿಯರು ಇತರರಿಗೆ ಮನಮು ಟ್ಟುವಂತೆ ವಿವರಿಸಿದ್ದು ವಿಶೇಷವಾಗಿತ್ತು.`ವಿಜ್ಞಾನ ವಸ್ತುವಿನ ಮಾದರಿ ತಯಾರಿಸಲು ತರಬೇತಿ ಪಡೆದಿದ್ದೆವು. ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿರುವುದರಿಂದ ಮಾದರಿ ತಯಾರಿಸಲು ಅನು ಕೂಲವಾಯಿತು. ಜೊತೆಗೆ ನಾವು ತಯಾರಿಸಿದ ಮಾದರಿಯ ಸಂಪೂರ್ಣ ಮಾಹಿತಿ ನಮಗೆ ಸಿಕ್ಕಿದ್ದು ಹೆಚ್ಚಿನ ಖುಷಿ ನೀಡಿತ್ತು~ ಎಂದು ಜ್ವಾಲಾಮುಖಿ ಮಾದರಿ ತಯಾರಿಸಿದ 8ನೇ ತರಗತಿಯ ವಿದ್ಯಾರ್ಥಿ ಶಾಂಭವಿ ಕುಲಕರ್ಣಿ ಸಂತಸ ಹಂಚಿಕೊಂಡರು.`ಆಲಮಟ್ಟಿ ಅಣೆಕಟ್ಟು ನೋಡಿದ್ದೆ. ಅಂಥ ಮಾದ ರಿಯನ್ನೇ ಮಾಡಬೇಕು ಎಂಬ ಆಸೆ ಇತ್ತು. ನನ್ನ ಆಸೆಯನ್ನು ಈ ವಿಜ್ಞಾನ ವಸ್ತುಪ್ರದರ್ಶನ ಈಡೇರಿ ಸಿತು. ಪಾಲಕರು ಸಹ ಆಲಮಟ್ಟಿ ಮಾದರಿ ನಿರ್ಮಾಣ ಹೇಗೆ ಮಾಡಬೇಕು ಎಂಬ ಮಾಹಿತಿ ನೀಡಿದ್ದರು. ಜೊತೆಗೆ ಶಿಕ್ಷಕರು ಸಹ ಮಾರ್ಗದರ್ಶನ ನೀಡಿದರಿಂದ ಜಲಾಶಯ ಮಾದರಿ ಮಾಡಲು ಸಾಧ್ಯವಾಯಿತು~ ಎನ್ನುತ್ತಾರೆ 9ನೇತರಗತಿ ವಿದ್ಯಾರ್ಥಿನಿ ರಸಿಕಾ ಇಂಗಳಗಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.