ಬಾಲಸೋರ್: `ಅಸ್ತ್ರ' ಕ್ಷಿಪಣಿ ಯಶಸ್ವಿ ಉಡ್ಡಯನ

7

ಬಾಲಸೋರ್: `ಅಸ್ತ್ರ' ಕ್ಷಿಪಣಿ ಯಶಸ್ವಿ ಉಡ್ಡಯನ

Published:
Updated:

ಬಾಲಸೋರ್ (ಒಡಿಶಾ)(ಪಿಟಿಐ): ದೇಸಿಯವಾಗಿ ಅಭಿವೃದ್ಧಿಪಡಿಸಿದ `ಅಸ್ತ್ರ' ಕ್ಷಿಪಣಿಯನ್ನು ಇಲ್ಲಿನ ಚಂಡೀಪುರ ಪರೀಕ್ಷಾ ಕೇಂದ್ರದಿಂದ ಶನಿವಾರ ಯಶಸ್ವಿಯಾಗಿ ಉಡಾಯಿಸಲಾಯಿತು.ಈ ಸುಸಜ್ಜಿತ ಕ್ಷಿಪಣಿಯನ್ನು ಚಂಡೀಪುರ ಪರೀಕ್ಷಾ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 3.34ಕ್ಕೆ ಉಡಾಯಿಸಲಾಯಿತು. ಇದೇ ಕ್ಷಿಪಣಿಯನ್ನು ಶುಕ್ರವಾರ ಕೂಡ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. `ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ಪರೀಕ್ಷಾ ಕೇಂದ್ರದ ನಿರ್ದೇಶಕ ಎಂ.ವಿ.ಕೆ.ವಿ ಪ್ರಸಾದ್ ಖಚಿತ ಪಡಿಸಿದ್ದಾರೆ.ಇಂಧನ ಆಧಾರಿತ `ಅಸ್ತ್ರ' ಕ್ಷಿಪಣಿ ಅತ್ಯಾಧುನಿಕವಾಗಿದ್ದು,  ಸಮಕಾಲೀನ ಬಿವಿಆರ್ ಕ್ಷಿಪಣಿಗಳಿಗಿಂತ ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸುತ್ತದೆ. ವೈಮಾನಿಕ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry