ಶನಿವಾರ, ನವೆಂಬರ್ 23, 2019
17 °C

ಬಾಲಿವುಡ್‌ಗೆ ಅನುಷ್ಕಾ!

Published:
Updated:

ಎಸ್.ಎಸ್. ರಾಜಮೌಳಿ ನಿರ್ದೇಶನದ `ಬಾಹುಬಲಿ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಟಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ನೂರು ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರವನ್ನು ತಮಿಳು, ತೆಲುಗು, ಹಿಂದಿಯಲ್ಲಿ ಚಿತ್ರೀಕರಿಸುವ ಉದ್ದೇಶ ನಿರ್ದೇಶಕರದು. ಈ ತ್ರಿಭಾಷಾ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ಬಾಲಿವುಡ್ ಪ್ರವೇಶಿಸಿದಂತಾಗುತ್ತಿದೆ.


`ಅರುಂಧತಿ' ಚಿತ್ರದ ನಂತರ ಸಾಕಷ್ಟು ಅವಕಾಶಗಳು ಬಂದರೂ ಅನುಷ್ಕಾ ಹಿಂದಿ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ರಾಜಮೌಳಿ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವುದು ಅವರಿಗೆ ಖುಷಿಯ ವಿಚಾರವಂತೆ. `ನನಗೆ ತೆಲುಗು- ತಮಿಳಿನಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ.

`ಸಿಂಗಮ್-2', `ರುದ್ರಮ್ಮ ದೇವಿ' ಚಿತ್ರಗಳಲ್ಲಿ ಸದ್ಯ ಬಿಜಿಯಾಗಿರುವೆ. ಇಂಥ ಸಮಯದಲ್ಲಿ ಹಿಂದಿಯಲ್ಲಿ ಸಿಗುವ ಅವಕಾಶಗಳಿಗೆ ಕೈಚಾಚುವುದು ಸರಿಯಲ್ಲ ಎನಿಸಿತ್ತು. `ಬಾಹುಬಲಿ'ಯಲ್ಲಿ ಅದಾಗಿಯೇ ಅವಕಾಶ ಒದಗಿ ಬಂದಿರುವುದರಿಂದ ಖುಷಿಯಾಗಿದೆ' ಎಂದಿದ್ದಾರೆ. ಅಂದಹಾಗೆ ಈ ಚಿತ್ರಕ್ಕಾಗಿ ಕತ್ತಿವರಸೆ, ಕುದುರೆಸವಾರಿಯನ್ನು ಅವರು ಕಲಿಯಬೇಕಿದೆಯಂತೆ.

ಪ್ರತಿಕ್ರಿಯಿಸಿ (+)