ಬಾಲಿವುಡ್‌ಗೆ `ಜಟ್ ಅಂಡ್ ಜೂಲಿಯೆಟ್'

7

ಬಾಲಿವುಡ್‌ಗೆ `ಜಟ್ ಅಂಡ್ ಜೂಲಿಯೆಟ್'

Published:
Updated:
ಬಾಲಿವುಡ್‌ಗೆ `ಜಟ್ ಅಂಡ್ ಜೂಲಿಯೆಟ್'

ಬಾಲಿವುಡ್ ಸಿನಿಮಾಗಳು ಇದೀಗ ರಿಮೇಕ್ ಹಾದಿಯನ್ನು ಹಿಡಿದಿವೆ. ದಕ್ಷಿಣ ಸಿನಿಮಾಗಳ ಜತೆಗೆ ಇದೀಗ ಪಂಜಾಬಿ ಸಿನಿಮಾಗಳತ್ತ ಮುಖ ಮಾಡಿವೆ. ಪಂಜಾಬ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದ `ಜಟ್ ಅಂಡ್ ಜೂಲಿಯೆಟ್' ಸಿನಿಮಾ ರಿಮೇಕ್ ಹಕ್ಕನ್ನು ನಿರ್ಮಾಪಕರಾದ ಹಿಮೇಶ್ ರೇಷಮಿಯಾ ಹಾಗೂ ರಾಕೇಶ್ ಉಪಾಧ್ಯಾಯ ಅವರನ್ನೊಳಗೊಂಡ ತಂಡ ಪಡೆದುಕೊಂಡಿದೆ.`ಕಿಲಾಡಿ 786' ಸಿನಿಮಾ ನಿರ್ಮಾಣದಲ್ಲಿ ನಿರತರಾಗಿದ್ದ ಈ ನಿರ್ಮಾಪಕರು ಸದ್ಯದಲ್ಲೇ `ಜಟ್ ಅಂಡ್ ಜೂಲಿಯೆಟ್'ಗೆ ಕೈಹಾಕಲಿದ್ದಾರೆ. ಹಿಂದಿಯಲ್ಲಿ ಈ ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುವುದು ಬಹುತೇಕ ಖಚಿತವಾಗಿದೆ.ಹಿಮೇಶ್ ಕೈಯಲ್ಲಿ ಈಗಾಗಲೇ ಹತ್ತು ಉತ್ತಮ ಚಿತ್ರಕಥೆಗಳಿವೆ. ಹೆಚ್ಚು ಹೆಚ್ಚು ಜನರನ್ನು ಸಿನಿಮಾದತ್ತ ಸೆಳೆಯುವ ಸಲುವಾಗಿ ನಗು ಉಕ್ಕಿಸುವ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕರು ತುಂಬು ನಗುವಿನಿಂದಲೇ ಹೋಗಬೇಕೆನ್ನುವುದು ನಮ್ಮ ಆಸೆ' ಎಂದು ಉಪಾಧ್ಯಾಯ ಹೇಳುತ್ತಾರೆ.           

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry