ಬಾಲಿವುಡ್‌ಗೆ ಪಂಚರಂಗಿ?

7

ಬಾಲಿವುಡ್‌ಗೆ ಪಂಚರಂಗಿ?

Published:
Updated:
ಬಾಲಿವುಡ್‌ಗೆ ಪಂಚರಂಗಿ?

ರಾಗಿಣಿ ದ್ವಿವೇದಿ ಖುಷಿಯಾಗಿದ್ದಾರೆ. ಅವರು ನಟಿಸಿರುವ `ಆರಕ್ಷಕ~ ಸಿನಿಮಾ ಯಶಸ್ವಿಯಾಗಿರುವುದು ಅವರ ಖುಷಿಗೆ ಒಂದು ಕಾರಣವಾದರೆ, ಬಾಲಿವುಡ್‌ನಿಂದ ಅವಕಾಶಗಳು ಬರುತ್ತಿರುವುದು ಮತ್ತೊಂದು ಕಾರಣ.ಇದೇ ರಾಗಿಣಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಕ್ಯಾಲೆಂಡರ್‌ಗೆ ಬಿಕಿನಿಯಲ್ಲಿ ಪೋಸು ನೀಡಿದ್ದ ನಾಯಕಿಯರ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈಗ, `ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ~ ಎನ್ನುತ್ತಿದ್ದಾರೆ.`ಬಿಕಿನಿ ತೊಡುವುದು ಅವರವರ ವೈಯಕ್ತಿಕ ಆಯ್ಕೆ. ನಾನು ನನ್ನ ವೃತ್ತಿ ಜೀವನದ ಈ ಹಂತದಲ್ಲಿ ಬಿಕಿನಿ ತೊಡಲಾರೆ ಎಂದಷ್ಟೇ ಹೇಳಿದ್ದೆ.  ನನ್ನ ಇಡೀ ಮಾತನ್ನು ಬೇರೆ ಅರ್ಥ ಬರುವಂತೆ ಹೇಳಲಾಗಿದೆ. ಕೆಲವರು ನಾನು ಪ್ರಚಾರಕ್ಕಾಗಿ ಈ ರೀತಿ ಮಾತನಾಡಿರುವೆ ಎಂದು ಹೇಳಿದ್ದಾರೆ. ನನಗೆ ನಿಜವಾಗಿಯೂ ಪ್ರಚಾರ ಬೇಕಿದ್ದರೆ ಪತ್ರಿಕಾಗೋಷ್ಠಿ ಕರೆದು ಅದನ್ನು ದೊಡ್ಡ ಸುದ್ದಿಯಾಗಿ ಮಾಡುತ್ತಿದ್ದೆ. ನನಗೆ ಆ ಬಗ್ಗೆ ಹೆಚ್ಚು ಮಾತನಾಡಲು ಇಷ್ಟವಿಲ್ಲ~ ಎನ್ನುವುದು ರಾಗಿಣಿ ಅವರ ಈ ಹೊತ್ತಿನ ಮಾತು.`ಆರಕ್ಷಕ~ ಚಿತ್ರದ ನೀರಿನೊಳಗಿನ ಹಾಡಿನ ಚಿತ್ರೀಕರಣದಲ್ಲಾದ ಅನುಭವಗಳನ್ನು ಮೆಲುಕು ಹಾಕಿದ ಅವರು, `ಈ ಸಿನಿಮಾದಲ್ಲಿ ನಟಿಯಾಗಿ ನಾನು ಬೆಳವಣಿಗೆ ಸಾಧಿಸಿದ್ದೇನೆ. ಮೊದಲ ಬಾರಿಗೆ ವೈದ್ಯಳ ಪಾತ್ರದಲ್ಲಿ ನಟಿಸಿರುವೆ. ಅದು ಅಭಿನಯ ಬೇಡುವ ಪಾತ್ರ.ಉಪೇಂದ್ರ ಅವರಂಥ ನಟನೊಂದಿಗೆ ನಟಿಸಿದ್ದೂ ಖುಷಿ ನೀಡಿತು. ನಾನು ನೀರೊಳಗಿನ ಸನ್ನಿವೇಶಗಳಲ್ಲಿ ನಟಿಸಿರಲಿಲ್ಲ. ನನಗೆ ಈಜುವುದೂ ಮರೆತುಹೋಗಿತ್ತು. ಆದರೆ ಚಿತ್ರೀಕರಣಕ್ಕೆ ಮುಂಚೆ ಈಜುವುದನ್ನು ಮತ್ತು ಮುಳುಗುವುದನ್ನು ಅಭ್ಯಾಸ ಮಾಡಿಕೊಂಡೆ. ಸನ್ನಿವೇಶ ಸೂಕ್ತ ರೀತಿಯಲ್ಲಿ ಬರಬೇಕಾದರೆ  ನೀರೊಳಗೆ ಉಸಿರು ಬಿಗಿಹಿಡಿಯುವುದು ನಿಜವಾದ ಸವಾಲಾಗಿತ್ತು~ ಎಂದು ನೆನಪುಗಳನ್ನು ಚಪ್ಪರಿಸುತ್ತಾರೆ.ಶಿವರಾಜ್‌ಕುಮಾರ್ ಜೊತೆಗಿನ `ಶಿವ~ ಚಿತ್ರದಲ್ಲಿ ಆಕ್ಷನ್ ಪಾತ್ರದಲ್ಲಿ ನಟಿಸಿರುವ ರಾಗಿಣಿ, ಫೈಟ್ ಸನ್ನಿವೇಶವೊಂದರಲ್ಲಿ ಬೈಕ್ ಚೇಸಿಂಗ್ ಮಾಡಿದ್ದಾರಂತೆ. `ನನಗೆ ಆಕ್ಷನ್ ಪಾತ್ರ ಮಾಡಬೇಕೆಂಬಾಸೆ ಇತ್ತು. ಅದು ಶಿವ ಸಿನಿಮಾದಲ್ಲಿ ಈಡೇರಿದೆ~ ಎನ್ನುವಾಗ ಅವರ ಕಣ್ಣುಗಳಲ್ಲಿ ಹೊಳಪು ಕಾಣುತ್ತದೆ. ಈ ವರ್ಷ ಅವರು ನಟಿಸಿದ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅದರೊಂದಿಗೆ ಅವರು ಬಾಲಿವುಡ್‌ಗೆ ಹಾರುವ ವಿಚಾರವೂ ಸೇರಿದೆ.ಬಾಲಿವುಡ್‌ನಲ್ಲಿ ಅವಕಾಶಗಳಿವೆ. ಕಥೆ ಇಷ್ಟವಾದರೆ ಒಪ್ಪಿಕೊಳ್ಳುವುದಾಗಿ ಹೇಳುವ ಅವರು, `ತಾವು ಎಲ್ಲೇ ಹೋದರೂ ಕನ್ನಡ ಚಿತ್ರೋದ್ಯಮವನ್ನು ಎಂದಿಗೂ ಮರೆಯವುದಿಲ್ಲ~ ಎಂದು ಹೇಳಲು ಮರೆಯುವುದಿಲ್ಲ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry