ಬಾಲಿವುಡ್‌ಗೆ ಮಸಾಬಾ ಪ್ರವೇಶ

7

ಬಾಲಿವುಡ್‌ಗೆ ಮಸಾಬಾ ಪ್ರವೇಶ

Published:
Updated:
ಬಾಲಿವುಡ್‌ಗೆ ಮಸಾಬಾ ಪ್ರವೇಶ

ಮಸಾಬಾ ಗುಪ್ತಾ, ಅಮ್ಮನಂತೆ ತೀಕ್ಷ್ಣ ಕಂಗಳು, ಚೂಪನೆಯ ಗದ್ದದ 24ರ ಸುಂದರಿ. ನೀನಾ ಗುಪ್ತಾ ಮಗಳು. ವಸ್ತ್ರವಿನ್ಯಾಸಕಿ.ಇದೀಗ ಬಾಲಿವುಡ್‌ಗೆ ವಸ್ತ್ರವಿನ್ಯಾಸವನ್ನು ಮಾಡುವ ಅವಕಾಶಗಳನ್ನು ಪಡೆಯುತ್ತಿರುವುದರಿಂದ ಖುಷಿಯಾಗಿದ್ದಾರೆ.ಇದಕ್ಕೆಲ್ಲ ಸೋನಮ್ ಕಪೂರ್ ಬೆಂಬಲವೇ ಕಾರಣ ಎಂದು ಮಸಾಬಾ ಗುಪ್ತಾ ಹೇಳಿದ್ದಾರೆ.

ನೀನಾ ಗುಪ್ತಾ ಹಾಗೂ ವಿವಿಯನ್ ರಿಚರ್ಡ್ಸ್ ಮಗಳು ಮಸಾಬಾ. ಅವರ ಸಂಗ್ರಹದ ಸೀರೆಗಳೆಂದರೆ ಬಾಲಿವುಡ್ ನಟಿಯರಿಗೆ ಅತಿ ಪ್ರೀತಿಯಂತೆ. ಸೋನಂ ಕಪೂರ್, ಕರೀನಾ ಕಪೂರ್, ವಿದ್ಯಾ ಬಾಲನ್ ಮುಂತಾದವರೆಲ್ಲರೂ ಮಸಾಬಾ ಸೀರೆಯನ್ನುಟ್ಟು ಸಂಭ್ರಮಿಸಿದವರು.`ಬುಡಕಟ್ಟು ಮೂಲದಿಂದ ಬಂದಿರುವೆ. ಹಾಗಾಗಿ ಬುಡಕಟ್ಟು ಜನಾಂಗದ ಮುಗ್ಧತೆ ಮತ್ತು ಸೃಜನಶೀಲತೆಯ ಸಮನ್ವಯ ಈ ವಸ್ತ್ರ ವಿನ್ಯಾಸದಲ್ಲಿದೆ. ನಾಗರಿಕತೆಯ ನಯ, ನಾಜೂಕು ವಸ್ತ್ರ ವೈವಿಧ್ಯದಲ್ಲಿದೆ' ಎಂದು ಮಸಾಬಾ ತಮ್ಮ ವಿನ್ಯಾಸವನ್ನು ವಿಶ್ಲೇಷಿಸಿದ್ದಾರೆ.ಇದೀಗ ಸತ್ಯಾಪೌಲ್‌ಗಾಗಿ ಫ್ಯಾಶನ್ ನಿರ್ದೇಶಕಿಯಾಗಿ ಆಯ್ಕೆಯಾಗಿರುವ ಮಸಾಬಾ, ಇದಕ್ಕೆಲ್ಲ ಸೋನಂ ಕಪೂರ್ ಪ್ರೋತ್ಸಾಹವೇ ಕಾರಣ ಎಂದು ಹೇಳಿಕೊಂಡಿದ್ದಾರೆ.ಗಾಢ ವರ್ಣ ಹಾಗೂ ತೆಳುವರ್ಣಗಳೊಂದಿಗೆ ಆಟವಾಡುವುದೆಂದರೆ ಮಸಾಬಾಗೆ ಅತಿ ಇಷ್ಟದ ಕೆಲಸವಂತೆ.ಒಂದು ವೇಳೆ ಸೋನಂನಂಥ ಸುಂದರಿ ತಮ್ಮ ಸೀರೆಗಳನ್ನು ಒಪ್ಪಿಕೊಳ್ಳದಿದ್ದರೆ ಈ ಮಟ್ಟದ ಪ್ರಚಾರ ಸಿಗುತ್ತಿರಲಿಲ್ಲ ಎಂದು ಮಸಾಬಾ ಹೇಳಿಕೊಂಡಿದ್ದಾರೆ. `ನನಗಿನ್ನೂ 24 ವರ್ಷ. ವಸ್ತ್ರವಿನ್ಯಾಸದ ಕ್ಷೇತ್ರದಲ್ಲಿ ಬೆಳೆಯಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಸದ್ಯ `ಮಸಾಬಾ ಕಲೆಕ್ಷನ್ಸ್' ಮಳಿಗೆಯ ನಿರ್ವಹಣೆಯೊಂದಿಗೆ ಈ ಹೊಸ ಜವಾಬ್ದಾರಿಯೂ ಸಾಹಸದ್ದು ಎನಿಸುತ್ತಿದೆ. ಆದರೆ ಎರಡನ್ನೂ ನಿಭಾಯಿಸುವ ಭರವಸೆ ಇದೆ' ಎಂಬ ಆಶಾವಾದ ಮಸಾಬಾದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry