ಬಾಲಿವುಡ್‌ನ ಛಾಯಾಗ್ರಾಹಕ ಗೌತಮ್ ರಾಜಾಧ್ಯಕ್ಷ ಇನ್ನಿಲ್ಲ

ಬುಧವಾರ, ಮೇ 22, 2019
24 °C

ಬಾಲಿವುಡ್‌ನ ಛಾಯಾಗ್ರಾಹಕ ಗೌತಮ್ ರಾಜಾಧ್ಯಕ್ಷ ಇನ್ನಿಲ್ಲ

Published:
Updated:

ಮುಂಬೈ (ಪಿಟಿಐ): ಬಾಲಿವುಡ್ ಮತ್ತು ಫ್ಯಾಷನ್ ಲೋಕದ ಹೆಸರಾಂತ ಛಾಯಾಗ್ರಾಹಕ ಗೌತಮ್ ರಾಜಾಧ್ಯಕ್ಷ (62) ತೀವ್ರ ಹೃದಯಾಘಾತದಿಂದ ಮಂಗಳವಾರ ತಮ್ಮ ಇಲ್ಲಿನ ನಿವಾಸದಲ್ಲಿ ನಿಧನರಾದರು.ಗೌತಮ್ ತೆಗೆದ ಛಾಯಾಚಿತ್ರಗಳಿಂದ ಮಾಧುರಿ ದಿಕ್ಷೀತ್ ಸೇರಿದಂತೆ ಹಲವರು ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣವಾಯಿತು.

ಗೌತಮ್ ಖ್ಯಾತ ಲೇಖಕಿ ಶೋಭಾ ಡೇ ಅವರ ಸಹೋದರ. `ಗೌತಮ್ ಅವರ ಫೋಟೋಗ್ರಫಿ  ಶೈಲಿ ಅನನ್ಯ ಮತ್ತು ಕಲಾತ್ಮಕವಾಗಿತ್ತು. ಅದನ್ನು ಯಾವುದಕ್ಕೂ ಹೋಲಿಸಲಿಕ್ಕಾಗದು~ ಎಂದು ಶೋಭಾ ಡೇ ಹೇಳಿದ್ದಾರೆ.

`ರಾಜಾಧ್ಯಕ್ಷ ಛಾಯಾಗ್ರಾಹಕ ಆಗಿದ್ದಲ್ಲದೇ ಉತ್ತಮ ಗಾಯಕ ಕೂಡ ಆಗಿದ್ದರು. ಸಂಗೀತದ ಕುರಿತು ನನ್ನೊಂದಿಗೆ ಚರ್ಚಿಸುತ್ತಿದ್ದ ಅವರು, ಫೋಟೋಗ್ರಫಿ  ಬಗ್ಗೆ ಹೇಳಿಕೊಡುತ್ತಿದ್ದರು ~ ಎಂದು ಲತಾ ಮಂಗೇಶ್‌ಕರ್ ನೆನಪಿಸಿಕೊಂಡಿದ್ದಾರೆ.ಕರಣ್ ಜೋಹರ್, ಮಧುರ್ ಭಂಡಾರಕರ್, ಬೊಮನ್ ಇರಾನಿ, ಶ್ರೇಯಾ ಘೋಷಾಲ್‌ಅವರು ಗೌತಮ್ ಅವರ ಮನೆಗೆ ತೆರಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry