ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ

7

ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ

Published:
Updated:

ಮುಂಬೈ (ಐಎಎನ್ಎಸ್): ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅವರ ಅಂತ್ಯಕ್ರಿಯೆಯು ಅವರು ಕುಟುಂಬ ಸದಸ್ಯರು ಮತ್ತು ನಗರದ ಗಣ್ಯರ ಸಮಕ್ಷಮದಲ್ಲಿ ಇಲ್ಲಿನ ಓಶಿವಾರ ರುದ್ರಭೂಮಿಯಲ್ಲಿ ಭಾನುವಾರ ನಡೆಯಿತು.ಕನ್ವರ್ ಅವರು ಫೆಬ್ರುವರಿ 3ರಂದು ಸಿಂಗಾಪುರದಲ್ಲಿ ನಿಧನರಾಗಿದ್ದು ಅವರ ಪಾರ್ಥಿವ ಶರೀರವನ್ನು ಶನಿವಾರ ರಾತ್ರಿ ಇಲ್ಲಿಗೆ ವಿಮಾನ ಮೂಲಕ ತರಲಾಗಿತ್ತು. ಅವರಿಗೆ 53 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರರಾದ ಕರಣ್ (20) ಮತ್ತು ಅಭಯ (16) ಅವರನ್ನು ಅಗಲಿದ್ದಾರೆ.ರಾಜ್ ಕನ್ವರ್ ಅವರು ಕಳೆದ ಒಂದು ವರ್ಷದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಮೂತ್ರಪಿಂಡ ಕಸಿ ಸಲುವಾಗಿ ಸಿಂಗಾಪುರಕ್ಕೆ ತೆರಳಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಮುನ್ನವೇ ಅವರು ಅಸುನೀಗಿದರು.ಬಾಲಿವುಡ್ ಗಣ್ಯರಾದ ಅಬ್ಬಾಸ್ ಮಸ್ತಾನ್, ರಝಾ ಮುರದ್, ಸಾಜಿದ್ ನಾಡಿವಾಲಾ, ಸತೀಶ್ ಕೌಶಿಕ್, ಪೂನಂ ಸಿನ್ಹ ಮತ್ತು ಲುವ್ ಸಿನ್ಹ ಮತ್ತಿತರರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ರಾಜ್ ಕನ್ವರ ನಿಧನ ಚಲನಚಿತ್ರ ಉದ್ಯಮಕ್ಕೆ ದೊಡ್ಡ ನಷ್ಟ ಎಂಬುದಾಗಿ ಫರ್ಹಾ ಖಾನ್ ಹೇಳಿದರು. ~ನಾನು ಅವರೊಂದಿಗೆ ಹರ್ ದಿಲ್ ಜೊ ಪ್ಯಾರ್ ಕರೇಗಾ~ ದಲ್ಲಿ ನಟಿಸಿದ್ದೆ. ಅವರೊಬ್ಬ ಅತ್ಯುತ್ತಮ ನಿರ್ದೇಶಕರಾಗಿದ್ದರು. ನಾನು ಅವರನ್ನು ಕಳೆದುಕೊಂಡಿದ್ದೇನೆ~ ಎಂದು ಫರ್ಹಾ ನುಡಿದರು.ಶಾರುಖ್ ಮತ್ತು ಪ್ರಿಯಾಂಕಾ ಛೋಪ್ರಾ ಅವರಿಗೆ ~ದೀವಾನಾ~ ಮತ್ತು ~ಅಂದಾಜ್~ ಚಿತ್ರಗಳ ಮೂಲಕ ಚಿತ್ರೋದ್ಯಮದಲ್ಲಿ ಮೊದಲ ಯಶಸ್ಸು ತಂದು ಕೊಟ್ಟವರಲ್ಲಿ ಕನ್ವರು ಒಬ್ಬರು. ಅವರು ~ಜುದಾಯಿ~, ~ಜೀತ್~, ~ಬಾದಲ್~, ಲಾಡ್ಲಾ~ ಚಿತ್ರಗಳನ್ನೂ ನಿರ್ದೇಶಿಸಿದ್ದರು. ~ಸಾಡಿಯಾಂ~ ಅವರ ಕೊನೆಯ ಚಿತ್ರವಾಗಿದ್ದು ಇದರಲ್ಲಿ ರಿಶಿ ಕಪೂರ್, ಹೇಮ ಮಾಲಿನಿ ಮತ್ತು ರೇಖಾ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry