ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಚೇತರಿಕೆ

ಗುರುವಾರ , ಜೂಲೈ 18, 2019
26 °C

ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಚೇತರಿಕೆ

Published:
Updated:

ಮುಂಬೈ (ಪಿಟಿಐ): ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿರಿಯ ನಟ ಹಾಗೂ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ (66) ಚೇತರಿಸಿಕೊಳ್ಳುತ್ತಿದ್ದು, ಅವರನ್ನು ತೀವ್ರ ನಿಗಾ ಘಟಕದಿಂದ ವಾರ್ಡಿಗೆ ವರ್ಗಾಯಿಸಲಾಗಿದೆ ಎಂದು ಚಿತ್ರ ನಿರ್ಮಾಪಕ ಮತ್ತು ಸಿನ್ಹಾ ಸಂಬಂಧಿ ಫಲ್ಹಾಜ್ ನಿಲಾನಿ ತಿಳಿಸಿದ್ದಾರೆ.ಶಸ್ತ್ರಚಿಕಿತ್ಸೆ ನಂತರ ಸಿನ್ಹಾ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡಿದೆ. ಸಂಪೂರ್ಣ ಗುಣಮುಖರಾಗಲು ಕೆಲ ಸಮಯ ಬೇಕಾಗಿದ್ದು, ಇನ್ನೂ ಮೂರ‌್ನಾಲ್ಕು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry