ಗುರುವಾರ , ನವೆಂಬರ್ 21, 2019
20 °C
ಪಂಚರಂಗಿ

ಬಾಲಿವುಡ್ ನಮ್ಮೂರಿಗಿಂತ ಭಿನ್ನವೇನಿಲ್ಲ: ತಾಪಸಿ ಪನ್ನು

Published:
Updated:
ಬಾಲಿವುಡ್ ನಮ್ಮೂರಿಗಿಂತ ಭಿನ್ನವೇನಿಲ್ಲ: ತಾಪಸಿ ಪನ್ನು

ದಕ್ಷಿಣದ ಹುಡುಗಿ ತಾಪಸಿ ಪನ್ನುಗೆ ಬಾಲಿವುಡ್, ಮಾಲಿವುಡ್, ಕಾಲಿವುಡ್, ಟಾಲಿವುಡ್ಡೆಲ್ಲಾ ಒಂದೇ ಅಂತ ಅನಿಸುತ್ತಿದೆಯಂತೆ. ಅಲ್ಲಿಗೂ ಇಲ್ಲಿಗೂ ಏನೇನೂ ವ್ಯತ್ಯಾಸವಿಲ್ಲ ಎನ್ನುವ ತಾಪಸಿ ಮುಂದೆ ಬಾಲಿವುಡ್‌ನಲ್ಲೇ ಗಟ್ಟಿಯಾಗಿ ನೆಲೆಯೂರುವ ಯೋಚನೆಯಲ್ಲಿದ್ದಾರೆ.ಡೇವಿಡ್ ಧವನ್ ನಿರ್ದೇಶನದ `ಚಷ್ಮೆ ಬದ್ದೂರ್' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಪನ್ನು ಮೊದಲ ಚಿತ್ರದಲ್ಲೇ ಸಾಕಷ್ಟು ತಿಳಿದುಕೊಂಡಿದ್ದಾರೆ. ಬಾಲಿವುಡ್‌ಗೂ ದಕ್ಷಿಣದ ಚಿತ್ರರಂಗಕ್ಕೂ ಅಂತ ಅಜಗಜಾಂತರವೇನೂ ಇಲ್ಲ ಎನ್ನುವ ಅವರ ಪ್ರಕಾರ ಭಾಷೆಯಷ್ಟೇ ಇರುವ ವ್ಯತ್ಯಾಸ.ದಕ್ಷಿಣ ಭಾರತದ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ತಾಪಸಿ ಭಾರತೀಯ ಚಿತ್ರರಂಗದ ಕುರಿತು ಮಾತನಾಡಿದ್ದಾರೆ. “ದಕ್ಷಿಣ ಭಾರತದ ಸಿನಿಮಾಗಳಂತೆ ಬಾಲಿವುಡ್ ಚಿತ್ರಗಳೂ 50ರಿಂದ 60 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುತ್ತವೆ. `ಚಷ್ಮೆ ಬದ್ದೂರ್' ಚಿತ್ರೀಕರಣ 55 ದಿನಗಳಲ್ಲೇ ಮುಗಿದುಹೋಯಿತು. ಬಾಲಿವುಡ್‌ನಲ್ಲಿರುವವರೆಲ್ಲಾ ವೃತ್ತಿಪರರು. ಸರಿಯಾದ ಸಮಯಕ್ಕೆ ಸೆಟ್‌ನಲ್ಲಿ ಹಾಜರಿರುತ್ತಾರೆ” ಎಂದಿದ್ದಾರೆ ತಾಪಸಿ.`ನಾನು ಬಾಲಿವುಡ್‌ನಲ್ಲೇ ಮುಂದುವರಿಯಬೇಕು ಎಂದು ಯೋಚನೆ ಮಾಡಿದ್ದೇನೆ. ಮುಂದೇನಾಗುತ್ತೋ ನೋಡಬೇಕು' ಎಂದು ಮಾತು ಸೇರಿಸುವ ತಾಪಸಿ ಕೈಲ್ಲೆಗ ದಕ್ಷಿಣ ಭಾರತ ನಾಲ್ಕು ಸಿನಿಮಾಗಳಿವೆ. 

ಪ್ರತಿಕ್ರಿಯಿಸಿ (+)