ಬಾಲಿವುಡ್ ಹಾಡು, ನೃತ್ಯ ನಿಷೇಧ

7

ಬಾಲಿವುಡ್ ಹಾಡು, ನೃತ್ಯ ನಿಷೇಧ

Published:
Updated:

ಲಾಹೋರ್ (ಐಎಎನ್‌ಎಸ್): ಲಾಹೋರ್‌ನ ಸಿನಿಮಾ ಮಂದಿರಗಳಲ್ಲಿ ಬಾಲಿವುಡ್ ಸಿನಿಮಾಗಳ ಯಾವುದೇ ಹಾಡು ಅಥವಾ ನೃತ್ಯಗಳನ್ನು ಪ್ರದರ್ಶಿಸದಂತೆ ನಿಷೇಧ ಹೇರಲಾಗಿದೆ.ಬಾಲಿವುಡ್ ಸಿನಿಮಾಗಳ ಹಾಡು ಹಾಗೂ ನೃತ್ಯಗಳಲ್ಲಿ ಅಶ್ಲೀಲತೆ ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಕೇವಲ ಶಾಸ್ತ್ರೀಯ ನೃತ್ಯಗಳಿಗೆ ಮಾತ್ರವೇ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಲಾಹೋರ್‌ನ ಪ್ರದರ್ಶನ ಕಲೆಗಳ ಮಂಡಳಿ ತಿಳಿಸಿದೆ.ಅಸಮಾಧಾನ: ಮಂಡಳಿಯ ಈ ನಿರ್ಧಾರ ಇಲ್ಲಿನ ಚಿತ್ರ ನಿರ್ಮಾಪಕರು ಹಾಗೂ ಕಲಾವಿದರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಇದರಿಂದ ಉದ್ಯಮಕ್ಕೆ ಧಕ್ಕೆ ಉಂಟಾಗಲಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇದರಿಂದ ಚಲನಚಿತ್ರ ವಾಣಿಜ್ಯೋದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ವಾಣಿಜ್ಯ ಚಲನಚಿತ್ರ ನಿರ್ಮಾಪಕರ ಸಂಸ್ಥೆಯ ಅಧ್ಯಕ್ಷ ಚೌಧರಿ ಝುಲ್ಫೀಕರ್ ಅಹಮದ್ ಹೇಳಿದ್ದಾರೆ.‘ವರ್ಷವೊಂದಕ್ಕೆ ಪಾಕಿಸ್ತಾನದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರವೇ ನಿರ್ಮಿಸಲಾಗುತ್ತದೆ. ಅದರಲ್ಲೂ ಹಾಡುಗಳು, ನೃತ್ಯಗಳು ತುಂಬಾ ಕಡಿಮೆ ಇರುತ್ತವೆ. ಶಾಸ್ತ್ರೀಯ ನೃತ್ಯಗಳನ್ನು ಕೆಲವೇ ಮಂದಿ ಇಷ್ಟಪಡುತ್ತಾರೆ. ಆದ್ದರಿಂದ ಸಿನಿಮಾಗಳನ್ನೇ ನಿಷೇಧಿಸುವ ಬದಲು ಅಶ್ಲೀಲ  ದೃಶ್ಯಗಳಿಗೆ ಕತ್ತರಿ ಹಾಕುವ ಬಗ್ಗೆ ಆಲೋಚಿಸಬೇಕು’ ಎಂದು ಹೇಳಿದ್ದಾರೆ.‘ಹಾಡುಗಳನ್ನು ಸಿ.ಡಿ, ಡಿವಿಡಿಗಳಲ್ಲಿ ನೋಡಲು ಅವಕಾಶವಿರುವಾಗ ಚಿತ್ರಮಂದಿರಗಳಲ್ಲಿ ನಿಷೇಧ ಹೇರುವುದರಿಂದ ಏನೂ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಸ್ವಾಗತ: ಏತನ್ಮಧ್ಯೆ ಲಾಹೋರ್ ಕಲಾ ಮಂಡಳಿಯ ನಿರ್ಧಾರವನ್ನು ಪಾಕಿಸ್ತಾನಿ ಕಲಾವಿದರಾದ ಸಮೀನಾ ಅಹಮದ್ ಮತ್ತು ಉಸ್ಮಾನ್ ಪೀರ್‌ಜಾದಾ ಸ್ವಾಗತಿಸಿದ್ದಾರೆ.

‘ಬಾಲಿವುಡ್ ಸಿನಿಮಾಗಳಲ್ಲಿ ಹಾಡು, ನೃತ್ಯಗಳು ಅಶ್ಲೀಲವಾಗಿರುತ್ತವೆ ಎಂಬುದು ದಿಟ. ಇವುಗಳನ್ನು ಸಮರ್ಥಿಸಬಹುದಾದ ಯಾವುದೇ ಅಂಶಗಳೂ ನಮಗೆ ಕಾಣುವುದಿಲ್ಲ. ಆದ್ದರಿಂದ ಇವುಗಳನ್ನು ಸಂಪೂರ್ಣ ನಿಷೇಧ ಮಾಡುವುದೇ ಸೂಕ್ತ ಕ್ರಮ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry