ಬಾಲೆಯಲ್ಲ. ಉಗ್ರರ ಪಾಲಿನ ಸಿಡಿಗುಂಡು

7

ಬಾಲೆಯಲ್ಲ. ಉಗ್ರರ ಪಾಲಿನ ಸಿಡಿಗುಂಡು

Published:
Updated:

ಹೆಣ್ಣುಮಕ್ಕಳ ಶಿಕ್ಷಣ ಹಕ್ಕಿನ ಪರ ದನಿಯೆತ್ತಿರುವ ಪಾಕಿಸ್ತಾನದ ಮಲಾಲಾ ಯೂಸುಫ್‌ಜೈ. ಮೇಲೆ ತಾಲಿಬಾನ್ ಉಗ್ರರು ನಡೆಸಿದ ಕೃತ್ಯ ಹೇಡಿತನದ್ದು.ಮಕ್ಕಳೆಂಬ ಮಮಕಾರವಿಲ್ಲದ ಕ್ರೌರ್ಯ ಪಿಶಾಚಿಗಳ ಈ ದಾಳಿಗೆ, ಅಲ್ಲಿ ಆಡಳಿತ ನಡೆಸಿರುವ ಮತ್ತು ನಡೆಸುತ್ತಿರುವ ಸರ್ಕಾರಗಳು ಕಾರಣ. ಪಾಶ್ಚಿಮಾತ್ಯ ದೇಶಗಳ ಹಣದ ನೆರವು ಮತ್ತು ಶಸ್ತ್ರಾಸ್ತ್ರಗಳ ಆಮಿಷಕ್ಕೆ ಬಲಿಯಾಗಿ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡಿದ ಪಾಕ್, ಈ ಕೃತ್ಯಕ್ಕೆ ಪರೋಕ್ಷವಾಗಿ ಕಾರಣವಾಗಿದೆ.

 

ಸ್ವಾತ್ ಪ್ರದೇಶದ ಮಕ್ಕಳ ಶಿಕ್ಷಣ ಹಕ್ಕಿಗಾಗಿ ಮತ್ತು ಮತಾಂಧರ ಕಟ್ಟಾ ಕಾನೂನುಗಳ ವಿರುದ್ಧ ಸೆಟೆದು ನಿಂತ ಲಾಲಾ. ಮುಸ್ಲಿಂ ಜಗತ್ತಿಗೆ ಮಾತ್ರ ಹೆಮ್ಮೆಯ ಬಾಲೆಲ್ಲ. ಬದಲಿಗೆ ಎಲ್ಲಾ ಧರ್ಮದ ಮತಾಂಧರ ಪಾಲಿನ ಹೋರಾಟದ ಸಿಡಿಗುಂಡು. ಬೇಗ ಗುಣಮುಖವಾಗಿ ಬಾ ಮಲಾಲಾ..

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry