ಶುಕ್ರವಾರ, ಮಾರ್ಚ್ 5, 2021
27 °C

ಬಾಲೇಖಾನ್ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲೇಖಾನ್ ಸ್ಮರಣೆ

ಹಿಂದುಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಉಸ್ತಾದ್‌ ಬಾಲೇಖಾನ್‌ ಅವರ ಸ್ಮರಣಾರ್ಥ ಪ್ರತಿವರ್ಷದಂತೆ ಸಂಗೀತ ಕಾರ್ಯಕ್ರಮವನ್ನು ಉಸ್ತಾದ್ ಬಾಲೇಖಾನ್‌ ಟ್ರಸ್ಟ್, ನಗರದಲ್ಲಿ ಹಮ್ಮಿಕೊಂಡಿದೆ.ಜಯನಗರ ಎಂಟನೇ ಬ್ಲಾಕ್‌ನಲ್ಲಿರುವ ಜೆ.ಎಸ್‌.ಎಸ್. ಸಭಾಂಗಣದಲ್ಲಿ ಮಾ.8ರಂದು ನಡೆಯುವ ಸಂಗೀತ ಕಾರ್ಯಕ್ರಮವು ಉಸ್ತಾದ್‌ ಬಾಲೇಖಾನ್‌ ಅವರ ಕಿರಿಯ ಮಗಳು ಅನೀಸಾ ಬಾಲೇಖಾನ್‌ ಅವರ ಗಾಯನದ ಮೂಲಕ ಆರಂಭಗೊಳ್ಳಲಿದೆ.ನಂತರ ಹಿಂದುಸ್ತಾನಿ ಸಂಗೀತ ವಿದ್ವಾಂಸರಾದ ದೀಪಕ್ ಕುಮಾರ್ ಭಾಣುಸೆ ಅವರ ಗಾಯನ. ತಬಲಾ ಸಾಥ್– ಅತುಲ್ ಕಾಂಬ್ಳೆ. ಬಳಿಕ ಹಿರಿಯ ವಿದ್ವಾಂಸ ಪಂಡಿತ್ ವೆಂಕಟೇಶ್ ಕುಮಾರ್ ಅವರ ಕಛೇರಿ. ಕೇಶವ ಜೋಶಿ ತಬಲಾ ಹಾಗೂ ಸತೀಶ್ ಕೊಳ್ಳಿ ಹಾರ್‍ಮೋನಿಯಂ ಸಾಥ್ ನೀಡಲಿದ್ದಾರೆ.ಗಿರೀಶ್ ಕಾರ್ನಾಡ್ ಅವರು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶನಿವಾರ ಸಂಜೆ 5.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಉಸ್ತಾದ್ ಬಾಲೇಖಾನ್ ಅವರ ಹೆಸರಿನಲ್ಲಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದ  ನೀಡಲಾಗುತ್ತದೆ ಎಂದು ಟ್ರಸ್ಟ್‌ನ ಮುಖ್ಯಸ್ಥರಾದ ರಯೀಸ್ ಬಾಲೇಖಾನ್ ಹಾಗೂ ಹಫೀಜ್ ಬಾಲೇಖಾನ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.