ಮಂಗಳವಾರ, ಜನವರಿ 21, 2020
28 °C

ಬಾಲ್ಯವಿವಾಹ ಜಾಗೃತಿ ಮ್ಯಾರಥಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬಾಲ್ಯ ವಿವಾಹದ ನಿಷೇಧ ಬಗ್ಗೆ ಸಾರ್ವಜನಿರಲ್ಲಿ ಜಾಗೃತಿ ಹಾಗೂ ಕಾನೂನು ತಿದ್ದುಪಡಿ ಅಗತ್ಯವಿದೆ ಎಂದು ಜಿಲ್ಲಾ ಸೆಷನ್ಸ್  ನ್ಯಾಯಾಧಿೀಶ ಟಿ.ಎಚ್.ಆವಿನ ಹೇಳಿದರು. ನಗರದ ಮಹಾತ್ಮಾಗಾಂಧಿ ವೃತ್ತ­ದಲ್ಲಿ  ಬಾಲ್ಯ ವಿವಾಹ ನಿಷೇದ ಕುರಿತು ಅರಿವು ಹಾಗೂ ಜಾಗೃತಿಗಾಗಿ ನಡೆದ ಮ್ಯಾರ­ಥಾನ್ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಧಿ­ಕಾರಿ ಎನ್.ಎಸ್. ಪ್ರಸನ್ನ­ಕುಮಾರ ಮಾತನಾಡಿ, ಬಾಲ್ಯ ವಿವಾಹ­ದಿಂದಾಗುವು ಅಪಾಯ, ಅಪರಾಧ ಕುರಿತು ಜಿಲ್ಲೆಯಾದ್ಯಾಂತ ಜಾಗೃತಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗು­ವುದು. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಮನೆ-ಮನೆಗೆ ತೆರಳಿ ಅರಿವು ಮೂಡಿಸ­ಲಾ­ಗುವುದು ಎಂದರು.

ಡಿವೈಎಸ್ ಪಿ. ವಿಜಯ ಡಂಬಳ, ಮಕ್ಕಳ ಕಲ್ಯಾಣಾಧಿ­ಕಾರಿ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿ­ಕಾರಿ ಐ.ಬಿ.ಬೆನಕೊಪ್ಪ, ಹೂಗಾರ, ಜಿ.ಸಿ.ರೇಷ್ಮೇ, ಜಿಲ್ಲಾ ಮಕ್ಕಳ ರಕ್ಷಣಾಧಿ­ಕಾರಿ ಭಾರತಿ ಶೆಟ್ಟರ ಹಾಜರಿದ್ದರು.  ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಬಾಲ್ಯ ವಿವಾಹ ನಿಷೇದ ಕುರಿತ ಘೋಷಣೆ­ಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು   ಮ್ಯಾರಥಾನ್ ದಲ್ಲಿ ಪಾಲ್ಗೊಂಡಿದ್ದರು.ನಗರದ ಮಹಾತ್ಮಾ ಗಾಂಧಿವೃತ್ತದಿಂದ ಪ್ರಾರಂಭಗೊಂಡ ಮ್ಯಾರಥಾನ್ ಭೂಮರಡ್ಡಿ ವೃತ್ತ,ಹಳೇ ಡಿಸಿ ಆಪೀಸ್ ವೃತ್ತ, ಕಿತ್ತೂರ ಚನ್ನಮ್ಮ ರಾಣಿ ವೃತ್ತ, ಮುಳಗುಂದ ನಾಕಾದ ಮೂಲಕ ತೆರಳಿ ಜಿಲ್ಲಾಧಿಕಾರಿ ಆಡಳಿತ ಭವನದಲ್ಲಿ ಮುಕ್ತಾಯಗೊಂಡಿತು.

ಪ್ರತಿಕ್ರಿಯಿಸಿ (+)