ಬಾಲ್ಯ ಅಮೂಲ್ಯ: ನ್ಯಾಯಾಧೀಶ
ಶಿಡ್ಲಘಟ್ಟ: ಮಕ್ಕಳು ಶಿಕ್ಷಣ ವಂಚಿತರಾಗಿ ಕಾರ್ಮಿಕರಾಗುವುದು ನಾಗರಿಕ ಸಮಾಜದ ಅಸ್ವಸ್ಥತೆ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ್ಲ್ಲಲಿ ಮಾತನಾಡಿದರು.
ಬಾಲ್ಯ ಅಮೂಲ್ಯವಾಗಿದೆ. ಕುತೂಹಲ, ಆಟ ಮುಂತಾದ ಹಲವು ಚಟುವಟಿಕೆಗಳ ಆಗರವಾಗಿರುತ್ತದೆ. ಬಡತನದಿಂದ ಮಕ್ಕಳು ಬಾಲ ಕಾರ್ಮಿಕರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ತಿಳಿಸಿದರು.
ಬಾಲ ಕಾರ್ಮಿಕ ಪದ್ಧತಿ ತಡೆಗೆ ಶೈಕ್ಷಣಿಕ ಹಂತದಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಇದರ ಸದ್ಭಳಕೆಯಾಗಬೇಕಿದೆ ಎಂದು ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂ ಠ ಮಕ್ಕಳ `ಶಿಕ್ಷಣ ಹಕ್ಕುಗಳ~ ಬಗ್ಗೆ ಮಾತನಾಡಿದರು. ವಕೀಲ ಕೆ.ಯೋಗಾನಂದ `ಬಾಲನ್ಯಾಯ~ದ ಬಗ್ಗೆ ವಿವರಿಸಿದರು. ವಕೀಲ ಟಿ.ವಿ.ಚಂದ್ರಶೇಖರಗೌಡ `ಮಹಿ ಳಾ ಮತ್ತು ಮಕ್ಕಳ ಜೀವನಾಂಶ~, ವಕೀಲ ರವೀಂದ್ರನಾಥ `ಬಾಲ ಕಾರ್ಮಿಕರ ನಿಷೇಧ ಕಾಯ್ದೆ~ ಬಗ್ಗೆ ತಿಳಿಸಿದರು.
ವಿವಿಧ ಶಾಲಾ ಮಕ್ಕಳು ಹಾಗೂ ಶಿಕ್ಷಕರ ಜತೆ ನ್ಯಾಯಾಧೀಶರು ಮತ್ತು ವಕೀಲರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಲಕಾರ್ಮಿಕ ಪದ್ಧತಿ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿರೋಧಿ ದಿನಾಚರಣೆಯ ಅಂಗವಾಗಿ ಜಾಥಾ ನಡೆಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಮಿಕ ನಿರೀಕ್ಷಕ ಟಿ.ಕೆ.ನೇತ್ರಪಾಲ್, ವಕೀಲ ಡಿ.ಎ.ಅಶ್ವತ್ಥನಾರಾಯಣ, ಪುರಸಭೆ ಸದಸ್ಯ ಅಫ್ಸರ್ ಪಾಷ, ಮಹಮದ್ಅಲಿ, ವಕೀಲರಾದ ಬೈರಾರೆಡ್ಡಿ, ನಾರಾಯಣಪ್ಪ, ವೆಂಕಟೇಶ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.