ಬುಧವಾರ, ಜನವರಿ 22, 2020
16 °C

ಬಾಲ್ಯ ವಿವಾಹ: ಬಾಲಕಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಮಕ್ಕಳ ಸಹಾಯವಾಣಿ–1098ಕ್ಕೆ ಬಂದ ಕರೆ ಆಧರಿಸಿ ಕಾರ್ಯಾ ಚರಣೆ ನಡೆಸಿದ ಅಧಿಕಾರಿಗಳ ತಂಡ, ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆ ಯಲಿದ್ದ ಬಾಲ್ಯ ವಿವಾಹವನ್ನು ಪಾಲಕರ ಮನವೊಲಿಸಿ ತಡೆದ ಘಟನೆ ನಡೆದಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುವರ್ಣಾ ಜಾಧವ, ಜಿಲ್ಲಾ ಮಕ್ಕಳ ರಕ್ಷಣಾಧಿಕಾ ರಿಗಳ ಕಾರ್ಯಾಲಯದ ಸಿಬ್ಬಂದಿ ಭಾರತಿ ನಾಗರಾಳ, ವಿಜಾಪುರ ಗ್ರಾಮೀಣ ಪೊಲೀಸ್‌ ಠಾಣೆಯ ಎಎಸ್ ಐ ಎನ್.ಐ. ಜುಮನಾಳ, ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ, ಸಮಾ ಲೋಚಕಿ ಗೀತಾ ತುಪ್ಪದ ಅವರು ಸೋಮವಾರ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿದರು.ಗ್ರಾಮಸ್ಥರ ಸಭೆ ನಡೆಸಿದ ಈ ತಂಡ ದವರು, ‘ಈಗ ಮದುವೆ ಮಾಡಲಿರುವ ಬಾಲಕಿಯ ವಯಸ್ಸು ಕೇವಲ 13. ಕಾನೂನು ಪ್ರಕಾರ ಇದು ಶಿಕ್ಷಾರ್ಹ ಅಪರಾಧ. 18 ವರ್ಷ ತುಂಬುವರೆಗೆ ಮದುವೆ ಮಾಡಬೇಡಿ’ ಎಂದು ಮನವಿ ಮಾಡಿದರು. ಇದಕ್ಕೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ಈ ಬಾಲಕಿಗೆ 18 ವರ್ಷ ತುಂಬುವವರೆಗೆ ವಿವಾಹ ಮಾಡಿಕೊಡುವುದಿಲ್ಲ ಎಂದು ಪಾಲಕರು ಮುಚ್ಚಳಿಕೆ ಬರೆದುಕೊಟ್ಟರು ಎಂದು ಸುನಂದಾ ತೋಳಬಂದಿ ತಿಳಿಸಿದ್ದಾರೆ.ವಿದ್ಯುತ್‌ ತಗುಲಿ ಸಾವು

ವಿಜಾಪುರ:
ವಿದ್ಯುತ್‌ ತಗುಲಿ ಸಾಗರ ನರಸಪ್ಪ ಬಜಂತ್ರಿ (18) ಎಂಬ ಯುವಕ ಮೃತಪಟ್ಟ ಘಟನೆ ಇಲ್ಲಿಯ ಕೌಜಲಗಿ ಲೇಔಟ್‌ನ ರಹೀಂನಗರದಲ್ಲಿ ಸೋಮ ವಾರ ಬೆಳಿಗ್ಗೆ ನಡೆದಿದೆ.ಇವರು ಹೊಸ ಮನೆ ನಿರ್ಮಿಸು ತ್ತಿದ್ದು, ಕಟ್ಟಡಕ್ಕೆ ನೀರು ಹೊಡೆಯಲು ವಿದ್ಯುತ್‌ ಮೋಟಾರ್‌ ಚಾಲೂ ಮಾಡುವ ಸಂದರ್ಭದಲ್ಲಿ ವಿದ್ಯುತ್‌ ತಗುಲಿದೆ. ತಕ್ಷಣ ಆತ ಪಕ್ಕದ ಹೊಂಡದಲ್ಲಿ ಬಿದ್ದಿದ್ದು, ಆಸ್ಪತ್ರೆಗೆ ಸಾಗಿ ಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಬಾಲಕ ಮೂಲತಃ ವಿಜಾಪುರ ತಾಲ್ಲೂಕು ಹೊನವಾಡ ಗ್ರಾಮದವ. ಇಲ್ಲಿಯ ಗಾಂಧಿಚೌಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)