ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ಬಿ ತಂಡಕ್ಕೆ ಜಯ

ಶನಿವಾರ, ಜೂಲೈ 20, 2019
28 °C

ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ಬಿ ತಂಡಕ್ಕೆ ಜಯ

Published:
Updated:

ತುಮಕೂರು: ಕರ್ನಾಟಕ `ಬಿ~ ತಂಡ ಜಿಲ್ಲಾ ಪೃಥ್ವಿ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ 12 ವರ್ಷದೊಳಗಿನ ಮಿಶ್ರ ಡಬಲ್ ವಿಭಾಗದಲ್ಲಿ ಶನಿವಾರ ಪ್ರಶಸ್ತಿ ಪಡೆಯಿತು.ಕರ್ನಾಟಕ `ಎ~ ತಂಡ ದ್ವಿತೀಯ, ಆಂಧ್ರ ತೃತೀಯ ಮತ್ತು ಹೈದರಾಬಾದ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದವು.ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಕೇರಳ ತಂಡ ಹೈದರಾಬಾದ್ ತಂಡವನ್ನು 29-11, 29-21 ಅಂತರದಲ್ಲಿ ಮಣಿಸಿತು. ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಕರ್ನಾಟಕ ತಂಡ ಪುದುಚೇರಿಯನ್ನು 29-7, 29-15, ತಮಿಳುನಾಡು ತಂಡ ಕರ್ನಾಟಕವನ್ನು 29-20, 29-22 ರಲ್ಲಿ ಹಾಗೂ ಪುದುಚೇರಿ ತಂಡ ತುಮಕೂರನ್ನು 29-28, 29-23, ತಮಿಳುನಾಡು ತಂಡ ಕೇರಳವನ್ನು 29-8, 29-24 ಅಂತರದಲ್ಲಿ ಮಣಿಸಿತು.ಆಂಧ್ರಪ್ರದೇಶ ತಂಡ ಪುದುಚೇರಿಯನ್ನು 29-10, 29-9, ತಮಿಳುನಾಡು ತಂಡ ಹೈದರಾಬಾದ್ ತಂಡವನ್ನು 29-17, 29-20. ಆಂಧ್ರ ತಂಡ ಕರ್ನಾಟಕವನ್ನು 28-22, 29-24, ಹೈದರಾಬಾದ್ ತಂಡ ತುಮಕೂರು ತಂಡವನ್ನು 29-13, 29-17 ಅಂತರದಲ್ಲಿ ಮಣಿಸಿತು.ಮಹಿಳೆಯರ ವಿಭಾಗದಲ್ಲಿ ಕೇರಳ ತಂಡ ಪುದುಚೇರಿಯನ್ನು 29-1, 29-1 ರಲ್ಲಿ ಸುಲಭವಾಗಿ ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry