ಬಾಲ್ ಬ್ಯಾಡ್ಮಿಂಟನ್: ಮೈಸೂರು ವಿಭಾಗಕ್ಕೆ ಪ್ರಶಸ್ತಿ

7

ಬಾಲ್ ಬ್ಯಾಡ್ಮಿಂಟನ್: ಮೈಸೂರು ವಿಭಾಗಕ್ಕೆ ಪ್ರಶಸ್ತಿ

Published:
Updated:

ಮೈಸೂರು: ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ತಂಡವು ದಸರಾ ಕ್ರೀಡಾಕೂಟದ ಬಾಲ್‌ಬ್ಯಾಡ್ಮಿಂಟನ್ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ ಮೈಸೂರು ವಿಭಾಗ ತಂಡವು 29-16, 29-15ರಿಂದ ಬೆಂಗಳೂರು ಗ್ರಾಮಾಂತರ ವಿಭಾಗವನ್ನು ಪರಾಭವಗೊಳಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ನಗರ ತಂಡವು 29-4, 29-3ರಿಂದ ಬೆಳಗಾವಿ ವಿಭಾಗವನ್ನು ಸೋಲಿಸಿತು.ಬೆಂಗಳೂರು, ಗುಲ್ಬರ್ಗ ಮುನ್ನಡೆ:

ಪುರುಷರ ವಿಭಾಗದ ಲೀಗ್ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಗುಲ್ಬರ್ಗ ವಿಭಾಗಗಳ ತಂಡಗಳು ತಲಾ 7 ಅಂಕ ಗಳಿಸಿ ಮುನ್ನಡೆಯಲ್ಲಿವೆ.ಮಂಗಳವಾರ ಮೂರನೇ ಸುತ್ತಿನ ಲೀಗ್‌ನಲ್ಲಿ  ಬೆಂಗಳೂರು ಗ್ರಾಮಾಂತರ ತಂಡವು 2-0 ನೇರ ಸೆಟ್‌ಗಳಿಂದ ಬೆಂಗಳೂರು ನಗರ ತಂಡವನ್ನು ಸೋಲಿಸಿತು. ಗುಲ್ಬರ್ಗ ತಂಡವೂ 2-0 ನೇರ ಸೆಟ್‌ಗಳಿಂದ ಬೆಳಗಾವಿ ವಿಭಾಗಕ್ಕೆ ಸೋಲುಣಿಸಿತು.ಇನ್ನೊಂದು ಪಂದ್ಯದಲ್ಲಿ ಮೈಸೂರು ವಿಭಾಗವು 2-0 ನೇರ ಸೆಟ್‌ಗಳಿಂದ ಬೆಳಗಾವಿ ತಂಡದ ವಿರುದ್ಧ ಗೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry