ಭಾನುವಾರ, ನವೆಂಬರ್ 17, 2019
29 °C
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

ಬಾಲ ನ್ಯಾಯ ಮಂಡಳಿ ಆದೇಶ ಮುಂದೂಡಿಕೆ

Published:
Updated:

ನವದೆಹಲಿ (ಐಎಎನ್‌ಎಸ್): ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ 18 ವರ್ಷದೊಳಗಿನ ಬಾಲಕ ಆರೋಪಿಯ ಕುರಿತಂತೆ ತನ್ನ ಆದೇಶವನ್ನು ಬಾಲ ನ್ಯಾಯ ಮಂಡಳಿಯು ಜುಲೈ 25ಕ್ಕೆ ಮುಂದೂಡಿದೆ.ಕಳೆದ ತಿಂಗಳಲ್ಲಿ ಹದಿನೆಂಟನೆಯ ವಯಸ್ಸಿಗೆ ಕಾಲಿಟ್ಟ ಆರೋಪಿ ಬಾಲಕ ಅಪರಾಧ ಕೃತ್ಯ ನಡೆಸಿದ ವೇಳೆ ಹದಿನೇಳುವರೆ ವಯಸ್ಸಿಯವನಾಗಿದ್ದರಿಂದ ಆತನಿಗೆ ಈಗಾಗಲೇ ಜೈಲಿನಲ್ಲಿ ಆತ ಕಳೆದಿರುವ ಸಮಯವನ್ನು ಸೇರಿದಂತೆ ಗರಿಷ್ಠ ಮೂರು ವರ್ಷ ಶಿಕ್ಷೆ ವಿಧಿಸಬಹುದಾಗಿದೆ.ಆರೋಪಿಗಳೆಲ್ಲರಲ್ಲೇ ಅತಿ ಕ್ರೂರವಾಗಿ ವರ್ತಿಸಿದ್ದ ಎನ್ನಲಾದ ಈ ಬಾಲಕ ಆರೋಪಿಯನ್ನು ವಯಸ್ಕ ಆರೋಪಿಯೆಂದು ಪರಿಗಣಿಸಿ ಆತನಿಗೆ ಶಿಕ್ಷೆ ವಿಧಿಸಬೇಕೆಂದು ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿಯ ಕುಟುಂಬದವರು ಹಾಗೂ ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಿವೆ. ಒಂದು ವೇಳೆ ಈತನನ್ನು ವಯಸ್ಕನೆಂದು ಪರಿಗಣಿಸಿದರೆ ಆತನಿಗೆ ಮರಣದಂಡನೆ ಇಲ್ಲವೇ ಜಿವಾವಧಿ ಶಿಕ್ಷೆ ತಪ್ಪಿದ್ದಲ್ಲ.ಪ್ರಕರಣದ ಪ್ರಮುಖ ಆರೋಪಿಯಾದ ರಾಮಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದನು. ಉಳಿದ ಆರೋಪಿಗಳ ವಿಚಾರಣೆಯನ್ನು ದೆಹಲಿ ತ್ವರಿಗತಿ ನ್ಯಾಯಲಯ ವಿಚಾರಣೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಬಾಲಕ ಆರೋಪಿಯ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಬಾಲ ನ್ಯಾಯ ಮಂಡಳಿಯು ತನ್ನ ಆದೇಶವನ್ನು ಜುಲೈ 11ಕ್ಕೆ ಪ್ರಕಟಿಸುವುದಾಗಿ ತಿಳಿಸಿತ್ತು.

ಪ್ರತಿಕ್ರಿಯಿಸಿ (+)