ಶನಿವಾರ, ಮೇ 28, 2022
31 °C

ಬಾಳು ಕೊಟ್ಟವನೇ ಬಾಳಿಗೆ ಮುಳುವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು:ನಗರದ ಕೋಡಿಕಲ್‌ನ ಜೆ.ಬಿ.ಲೋಬೊ ರಸ್ತೆಯಲ್ಲಿನ ಮ ೆಯೊಂದರಲ್ಲಿ ಸೋಮವಾರ ಸಂಜೆ ನೀರವ ಮೌನ ಮಡುಗಟ್ಟಿತ್ತು. ಮನೆಯ ಜಗುಲಿಯಲ್ಲಿ ಮಹಿಳೆ ಶವವಾಗಿ ಬಿದ್ದಿದ್ದಳು. ಉನ್ನತ ವ್ಯಾಸಂಗ ಮಾಡಿದ್ದ ಆಕೆ ಕಾನೂನು ಕಾಲೇಜಿನ ಉಪ ನ್ಯಾಸಕಿಯಾಗಿದ್ದಳು. ಅನಾಥಳಾಗಿದ್ದ ಆಕೆಗೆ ಬಾಳು ಕೊಟ್ಟಾತನೇ ಆಕೆಯ ಬಾಳನ್ನು ಹರಣ ಮಾಡಿದ್ದ.ದೂರದರ್ಶನ ಚಾನೆಲ್‌ನ ಅರೆಕಾಲಿಕ ವರದಿಗಾರ ಗಂಗಾಧರ್ ಪಡುಬಿದ್ರಿ ಉರ್ವ ಠಾಣೆಯಲ್ಲಿ ಸೋಮವಾರ ರಾತ್ರಿ ಹೇಳಿಕೆ ನೀಡಿ, ಈ ಕೊಲೆ ಮಾಡಿದ್ದು ನಾನೇ ಎಂದು ಹೇಳಿದ. ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.ಎಸ್‌ಡಿಎಂ ಕಾನೂನು ಕಾಲೇಜಿನ ಸಹಾಯಕ ಪ್ರೊಫೆಸರ್ ಮಮತಾ ಶೆಟ್ಟಿ (33) ಅವರನ್ನು ಸೋಮವಾರ ಸಂಜೆ ಕೋಡಿಕಲ್‌ನ ಅವರ ಮನೆಯಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡ ಲಾಗಿತ್ತು. ಆರೋಪಿ ತನ್ನ ಕೃತ್ಯವನ್ನು ಸಹೋದರ ಮೋಹನಾಂಗಯ್ಯ ಸ್ವಾಮಿ ಅವರಿಗೆ ತಿಳಿಸಿದ. ಬಳಿಕ ಮಾಹಿತಿ ಲಭಿಸಿ ಆರೋಪಿಯನ್ನು ಬಂಧಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಮೂರು ವರ್ಷಗಳ  ಹಿಂದೆ ವಿವಾಹವಾಗಿದ್ದ ಗಂಗಾಧರ್-ಮಮತಾ ಅವರ ದಾಂಪತ್ಯದಲ್ಲಿ ಕಲಹ ತುಂಬಿತ್ತು. ಎರಡು ದಿನದ ಹಿಂದೆಯಷ್ಟೇ ಉರ್ವ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಆದರೆ ಸೋಮವಾರ ಅವರ ನಡುವಿನ ಕಲಹ ಕೊಲೆಯಲ್ಲಿ ಕೊನೆ ಗೊಂಡಿತು ಎಂದು ಪೊಲೀಸರು ಹೇಳಿದ್ದಾರೆ.ಅನಾಥ ಹುಡುಗಿ: ಮಮತಾ ಅವರು ಅನಾಥ ಹುಡುಗಿಯಾಗಿದ್ದಳು.  ಅವರ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದು ಇದೇ ಗಂಗಾಧರ್. ಕಾನೂನು ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಆಕೆಯನ್ನು ಉಪನ್ಯಾಸಕರನ್ನಾಗಿ ನೇಮಿ ಸುವಲ್ಲಿ ಸಹ ಗಂಗಾಧರ್ ಪ್ರಮುಖ ಪಾತ್ರ ನಿರ್ವಹಿಸಿದ್ದ. ಆಕೆ ಯನ್ನು ವಿವಾಹವಾಗಿ ಅನಾಥೆಗೆ ಬಾಳು ನೀಡಿದ ಹೆಗ್ಗಳಿಕೆಗೂ ಪಾತ್ರನಾಗಿದ್ದ. ಕೋಡಿಕಲ್‌ನಲ್ಲಿರುವ ಗಂಗಾಧರ್‌ನ ಅಕ್ಕನ ಮನೆ ಯಲ್ಲಿ ಅವರು ಸಂಸಾರ ನಡೆಸುತ್ತಿದ್ದರು. ಇವರಿಗೆ ಮಕ್ಕಳಿರಲಿಲ್ಲ.ಗಂಗಾಧರ್‌ನ ವರ್ತನೆಗಳ ಬಗ್ಗೆ ಮಮತಾಗೆ ಸಂಶಯ ಇತ್ತು. ಇದೇ ಕಾರ ಣಕ್ಕೆ ಅವರ ನಡುವೆ ಆಗಾಗ ಜಗಳ ನಡೆ ಯುತ್ತಿತ್ತು ಎಂದು ಹೇಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.