ಭಾನುವಾರ, ಏಪ್ರಿಲ್ 18, 2021
24 °C

ಬಾಳೆಹಣ್ಣಿನ ದರ ತೇಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಶುಕ್ರವಾರದಿಂದ ಶ್ರಾವಣ ಮಾಸ ಆರಂಭ. ಶ್ರಾವಣ ಮಾಸದ ಪೂಜೆಗೆ ಬಾಳೆ ಫಲ ಅಗತ್ಯ ವಸ್ತು. ಆದರೆ ಶ್ರಾವಣ ಮಾಸ ಆರಂಭದ ಮುನ್ನವೇ ನಗರದಲ್ಲಿ ಬಾಳೆಹಣ್ಣಿನ ದರ ತೇಜಿಯಾಗಿದೆ.ಒಂದು ಕೆಜಿ ಬಾಳೆಹಣ್ಣಿನ ದರದಲ್ಲಿ ಆರೆಂಟು ರೂಪಾಯಿ ಹೆಚ್ಚಳವಾಗಿದೆ. ಬಾಳೆಕಾಯಿ ಉತ್ಪಾದನೆ ಕುಂಠಿತ, ಹೆಚ್ಚುತ್ತಿರುವ ಬೇಡಿಕೆ ದರ ಏರಿಕೆಗೆ ಕಾರಣವಾಗಿದೆ. ಉತ್ತಮ ಜಾತಿಯ ಮಿಟ್ಲಿ ಬಾಳೆಹಣ್ಣಿನ ಒಂದು ಕೆಜಿಯ ಬೆಲೆ ರೂ 16 ಇದ್ದಿದ್ದು, ಈಗ ರೂ 22ಕ್ಕೆ ಜಿಗಿದಿದೆ. ಕರಿಬಾಳೆ ಪ್ರತಿ ಕೆಜಿಗೆ ರೂ 15 (ಹಿಂದಿನ ದರ 8 ರೂಪಾಯಿ), ಮೈಸೂರು ಬಾಳೆ ರೂ  8, ಪಚ್ಚಬಾಳೆ 10 ರೂಪಾಯಿಗೆ ವ್ಯಾಪಾರವಾಗುತ್ತಿದೆ. ಅಡುಗೆಗೆ ಬಳಸುವ ಶಾನಬಾಳೆ 2ರೂಪಾಯಿಗೆ ಒಂದರಂತೆ ಮಾರಾಟವಾಗುತ್ತಿದೆ. `ಹಾಪ್‌ಕಾಮ್ಸನಿಂದ ಬಾಳೆಹಣ್ಣಿಗೆ ದರ ನಿಗದಿ ಮಾಡಿದರೂ ಬೇಡಿಕೆ ಹೆಚ್ಚಿದಂತೆ ದರ ಹೆಚ್ಚುತ್ತದೆ. ನಗರದಲ್ಲಿ 25ಕ್ಕೂ ಅಧಿಕ ಹೋಲ್‌ಸೇಲ್ ವ್ಯಾಪಾರಸ್ಥರು ಬಾಳೆಹಣ್ಣಿನಿಂದ ಬದುಕು ಕಟ್ಟಿಕೊಂಡಿದ್ದಾರೆ. ಬಾಳೆಹಣ್ಣು ಮಂಡಿಯಿಂದ ನೂರಕ್ಕೂ ಅಧಿಕ ಜನರಿಗೆ ಉದ್ಯೋಗ ದೊರೆತಿದೆ~ ಎನ್ನುತ್ತಾರೆ ವೆಂಕಟೇಶ ಫ್ರುಟ್ಸ್‌ನ ಮಾಲೀಕ ವೆಂಕಟೇಶ ಶೇಟ್.`ಮಾಲು ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿದೆ. ಮನೆ ಬಾಗಿಲಿಗೆ ಹೋಗಿ ಬಿಡಿ ವ್ಯಾಪಾರಸ್ಥರು ಬಾಳೆಕಾಯಿ ಖರೀದಿ ಮಾಡುವುದರಿಂದ ಮಾರುಕಟ್ಟೆಯಲ್ಲಿ ಬಾಳೆಕಾಯಿ ಕೊರತೆಯಾಗುತ್ತದೆ. ಈ ಹಿಂದೆ ವಾರದಲ್ಲಿ 10 ಲೋಡ್ ಗೋವಾ ಹಾಗೂ ಮಂಗಳೂರಿಗೆ ರವಾನೆ ಆಗುತ್ತಿದ್ದು, ಈಗ 5 ರಿಂದ 6 ಲೋಡ್‌ಗೆ ಕುಸಿತ ಕಂಡಿದೆ~ ಎಂಬುದು ಇಲ್ಲಿನ ಶಿವಕೃಪ ಬನಾನಾ ಸ್ಟೋರ್ಸ್‌ನ ಹೋಲ್ ಸೇಲ್ ವ್ಯಾಪಾರಿ ಮಲ್ಲಿಕಾರ್ಜುನ ಮಡಗಾಂವಕರ ಅಭಿಪ್ರಾಯ.ಶ್ರಾವಣ ಮಾಸದ ಪ್ರಾರಂಭದಲ್ಲೇ ಬೆಲೆ ಏರಿಕೆ ಆಗಿರುವ ಬಾಳೆಹಣ್ಣು ಹಿಂದಿನ ವರ್ಷದಂತೆ ಈ ವರ್ಷವೂ ಒಂದು ಕೆಜಿಗೆ 30ರೂಪಾಯಿ ದರ ತಲುಪುವ ಸಾಧ್ಯತೆಗಳಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.