ಸೋಮವಾರ, ಏಪ್ರಿಲ್ 19, 2021
29 °C

ಬಾಳೆಹೊನ್ನೂರಿನಲ್ಲಿ ಲಘು ಭೂಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ):  ಪಟ್ಟಣದ ಹೊರವಲಯದ ಕೆಲವು ಕಡೆ ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಲಘು ಭೂಕಂಪನವಾಗಿ ಜನರು ಆತಂಕಕ್ಕೆ ಒಳಗಾದರು.ವಿವೇಕನಗರ, ಆಕ್ಷರನಗರ ಮತ್ತು ಇಟ್ಟಿಗೆ ಸೀಗೋಡುಗಳಲ್ಲಿ ಸಂಜೆ ವೇಳೆ ಜನ ಮನೆಯಲ್ಲಿದ್ದಾಗ ಬಾರಿ ಶಬ್ದವೊಂದು ಕೇಳಿ ಬಂತು. ನಂತರ ಕೇವಲ ಒಂದೆರಡು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಹನೀಫ್ ತಿಳಿಸಿದರು.ಕಂಪನದ ಅನುಭವ ಗಮನಕ್ಕೆ ಬರುತ್ತಿದ್ದಂತೆ ಮನೆಯಲ್ಲಿದ್ದ ಹೆಂಗಸರು, ಮಕ್ಕಳು ಹೊರಕ್ಕೆ ಬರಲು ತಯಾರಿ ನಡೆಸಿದರು. ಆದರೆ ತಕ್ಷಣ ಕಂಪನ ನಿಂತುಹೋಗಿ ಜನ ನಿಟ್ಟುಸಿರುಬಿಟ್ಟರು. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.