ಶನಿವಾರ, ಮೇ 15, 2021
25 °C

ಬಾಳೆಹೊನ್ನೂರು: ಗಾಳಿ ಮಳೆಗೆ ಅಪಾರ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ಸಮೀಪದ ರಂಭಾಪುರಿ ಪೀಠದ ಆವರಣದಲ್ಲಿ ಶನಿವಾರ ಬೀಸಿದ ಬಿರುಗಾಳಿ ಮಳೆಗೆ ಸುಮಾರು 50 ಲಕ್ಷಕ್ಕೂ ಹೆಚ್ಚಿನ ನಷ್ಟವಾಗಿದೆ.ಪೀಠದ ಶಿವನಾಂದ ಜ್ಯೋತಿ ಅತಿಥಿ ಗೃಹದ ಛಾವಣಿ ಸಂಪೂರ್ಣ ಹಾರಿಹೋಗಿದೆ. ಛಾವಣಿಯ ಶೀಟುಗಳು ಸುಮಾರು 150 ಅಡಿ ದೂರದ ರಸ್ತೆಗೆ ಬಿದ್ದಿವೆ.

 

ಲಿಂಗೈಕ್ಯ ಜಗದ್ಗುರು ಗದ್ದಿಗೆಗೆ ಅಳವಡಿಸಿದ ಛಾವಣಿ ಸಂಪೂರ್ಣ ಹಾರಿಹೋಗಿದೆ. ರೇಣುಕಾ ಮಂದಿರ ಹಾಗೂ ವೀರಭದ್ರಸ್ವಾಮಿ ದೇವಸ್ಥಾನದ ಹೆಂಚುಗಳು ರುದ್ರಮುನೀಶ್ವರ ಸಮುದಾಯ ಭವನಕ್ಕೆ ಹಾಕಿದ್ದ ಹೆಂಚುಗಳು ಹಾಗೂ ಸಿಬ್ಬಂದಿ ವಸತಿ ಗೃಹದ ಛಾವಣಿ,  ಸರ್ಕಾರಿ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿದ್ದು,  ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. `ಗಾಳಿ ಮಳೆಯಿಂದ ಪೀಠದಲ್ಲಿ ಲಕ್ಷಾಂತರ ರೂಪಾಯಿ  ಹಾನಿ ಸಂಭವಿಸಿದೆ~ ಎಂದು ಶಿವಮಹಾಂತ ಶಿವಾರ್ಚಾಯರು ತಿಳಿಸಿದ್ದಾರೆ.ಗಾಳಿಯಿಂದ ಆಗಿರುವ ಹಾನಿ ಕುರಿತು ವರದಿ ತಯಾರಿಸಲಾಗುವುದು. ಸದ್ಯಕ್ಕೆ ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು  ಪೀಠದ ಸಂಪರ್ಕ ಅಧಿಕಾರಿ ಪ್ರಭುದೇವ್ ಕಲ್ಮಠ ತಿಳಿಸಿದರು. ಪಟ್ಟಣದ ಅಂಗಡಿ ಮುಂಗಟ್ಟುಗಳಿಗೂ ಮಳೆಯಿಂದ ಹಾನಿಯಾಗಿದೆ.

 

ಜಿಲ್ಲೆ ಮಲೆನಾಡು ಭಾಗದ ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ ಹಾಗೂ ಶೃಂಗೇರಿಯಲ್ಲೂ ಸಾಧಾರಣ ಮಳೆಯಾಗಿದೆ. ಆದರೆ ಎಲ್ಲೂ ಹಾನಿಯಾದ ವರದಿಯಾಗಿಲ್ಲ.ಕಡೂರು ತಾಲ್ಲೂಕಿನ ಹಲವಾರು ಕಡೆ ಗಾಳಿ ಸಹಿತ ಮಳೆ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.