ಶನಿವಾರ, ಜೂನ್ 19, 2021
23 °C

ಬಾಳೆ ಎಲೆಗೂ ಬೇಡಿಕೆ ಭಾಗ್ಯ

ಎನ್.ಎಂ.ನಟರಾಜ್ ನಾಗಸಂದ್ರ Updated:

ಅಕ್ಷರ ಗಾತ್ರ : | |

ಬಾಳೆ ಹಣ್ಣುಗಳಿಗಾಗಿ ತೋಟ ಬೆಳೆಸುವುದಕಿಂತಲೂ ಈಗ ಎಲೆಗಳಿಗಾಗಿ ತೋಟಗಳನ್ನು ಬೆಳೆಸುವ ರೈತರ ಸಂಖ್ಯೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದೆ. ವಿವಾಹ ಸಮಾರಂಭ ಸೇರಿದಂತೆ ಎಲ್ಲಾ  ಶುಭ ಸಮಾರಂಭಗಳಲ್ಲೂ ಹಾಗೂ ಹೊಟೇಲ್‌ಗಳಲ್ಲಿ `ಬಾಳೆ ಎಲೆ~ ಊಟದ್ದೇ ವಿಶೇಷ.

 

ಊಟ ಮಾಡಲು ಬಾಳೆ ಎಲೆಯೆ ಇರಬೇಕು ಎನ್ನುವುದು ಈಗ ಕಡ್ಡಾಯ. ಹೀಗಾಗಿ ಊಟಕ್ಕಾಗಿ ಬಳಸುವ ಒಂದು ಬಾಳೆ ಎಲೆ ಬೆಲೆ 2.50 ರೂಪಾಯಿವರೆಗೂ ಇದೆ. ಇನ್ನು ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಬೆಳಗಿನ ತಿಂಡಿಗೆ ಬಳಸುವ ಒಂದು ಕಟ್ಟು (ಒಂದು ಕಟ್ಟಿನಲ್ಲಿ 40 ರಿಂದ 50 ಎಲೆಗಳಿರುತ್ತವೆ) ಎಲೆ ಬೆಲೆ 10 ರೂಪಾಯಿ.ದೊಡ್ಡಬಳ್ಳಾಪುರದಲ್ಲಿ ಬಾಳೆ ಮಂಡಿಗಳಂತೆ ಬಾಳೆ ಎಲೆ ಮಾರಾಟಕ್ಕಾಗಿಯೇ ಪ್ರತ್ಯೇಕ ಅಂಗಡಿಗಳು ಇವೆ.

 

`ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಬಹುತೇಕ `ತುದಿ~(ಸುಳಿ) ಎಲೆಗಳೆ ಇರಬೇಕು ಎನ್ನುತ್ತಾರೆ. ಎಲಕ್ಕಿ ಬಾಳೆ ಗಿಡದಲ್ಲಿ ಮಾತ್ರ ಊಟದ ಎಲೆ ದೊರೆಯುತ್ತವೆ. ಪಚ್ಚಬಾಳೆ ಗಿಡದ ಎಲೆಗಳು ದಪ್ಪ ಇರುತ್ತವೆ. ಇದರಿಂದಾಗಿ ಸಾಗಾಣಿಕೆಯಲ್ಲಿ ಹಾಗೂ ತೋಟದಲ್ಲಿ ಇರುವಾಗಲೂ ಗಾಳಿಗೆ ಎಲೆಗಳು ಸೀಳಿ ಹೋಗುತ್ತವೆ.



ಹೀಗಾಗಿ ಎಲೆ ಬಳಕೆಗೆ ಏಲಕ್ಕಿ ಬಾಳೆ ಗಿಡ ಮಾತ್ರ ಬಳಸಲಾಗುತ್ತದೆ. ಈ ಗಿಡದ ಎಲೆಗಳು ತೆಳುವು ಹಾಗೂ ಆಕರ್ಷಕ ಬಣ್ಣವನ್ನು ಹೊಂದಿರುತ್ತವೆ. ಸಾಗಾಣಿಕೆ, ಬಳಕೆಗೆ ಸುಲಭ~ ಎನ್ನುತ್ತಾರೆ ನಗರದ ಬಾಳೆ ಎಲೆ ಮಾರಾಟಗಾರ ಮೈಲಾರಯ್ಯ.



`ಸಾಮಾನ್ಯವಾಗಿ ಏಲಕ್ಕಿ ಬೆಳೆಗಾರರು ಮೊದಲ ಎರಡು ಅಥವಾ ಮೂರನೇ ಬೆಳೆಯನ್ನು ಮಾತ್ರ ಹಣ್ಣುಗಳಿಗಾಗಿ ಬೆಳೆಯುತ್ತಾರೆ. ಮೂರನೇ ಬೆಳೆ ನಂತರ ಸಹಜವಾಗಿಯೇ ಬಾಳೆ ಗೊನೆಗಳು ತೂಕ, ಗುಣಮಟ್ಟದಲ್ಲಿ ಕಡಿಮೆಯಾಗುತ್ತವೆ. ಹೀಗಾಗಿ ಗಿಡದ ಸುತ್ತ ಬರುವ ಕಂದುಗಳು (ಪುಟ್ಟ ಸಸಿಗಳನ್ನು) ಕಿತ್ತು ಹಾಕದೆ ಎಲೆಗಳಿಗಾಗಿ ಬೆಳೆಸಲಾಗುತ್ತದೆ~ ಎಂದು ಹೇಳುತ್ತಾರೆ ಚನ್ನವೀರನಹಳ್ಳಿ ಗ್ರಾಮದ ಬಾಳೆ ಬೆಳೆಗಾರ ಸಿ.ವಿ.ಲಕ್ಷ್ಮೀಪತಿ.



ಅವರ ಲೆಕ್ಕದ ಪ್ರಕಾರ ಒಂದು ಎಕರೆ ಬಾಳೆ ತೋಟವನ್ನು ಒಂದು ತಿಂಗಳ ಲೆಕ್ಕದಲ್ಲಿ 8 ರಿಂದ 10 ಸಾವಿರ ರೂಗಳ ವರೆಗೆ ಮಾರಾಟ ಮಾಡಲಾಗುತ್ತದೆ. ತೋಟದಲ್ಲೇ ಎಲೆಗಳ ಲೆಕ್ಕದಲ್ಲಿ ಮಾರಾಟ ಮಾಡುವುದಾದರೆ ಒಂದು ಬಾಳೆ ಎಲೆಗೆ 50 ರಿಂದ 70 ಪೈಸೆ ದೊರೆಯುತ್ತದೆ. ಬಾಳೆಯಲ್ಲಿ ಮೂರನೇ ಬೆಳೆ ಬಂದ ನಂತರ ಎಲೆ ಮಾರಾಟಕ್ಕಾಗಿಯೇ ಒಂದು, ಒಂದುವರೆ ವರ್ಷಗಳ ವರೆಗೂ ಗಿಡಗಳನ್ನು ಕಿತ್ತುಹಾಕದೆ ಆರೈಕೆ ಮಾಡಿ ಬೆಳೆಸಲಾಗುತ್ತದೆ~ ಎಂದು ಅವರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.