ಶುಕ್ರವಾರ, ಜೂನ್ 18, 2021
28 °C

ಬಾಳೆ ಬೆಳೆದವರ ನೆಮ್ಮದಿಯ ಬಾಳು

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

`ಬಾಳೆ~ ಬೆಳೆದವನು ಸುಖವಾಗಿ ಬಾಳಿಯಾನು ಎಂಬಂತೆ ಕಳೆದ ಎರಡು ವರ್ಷಗಳಿಂದ ತಾಲ್ಲೂಕಿನಲ್ಲಿ ಬಾಳೆ ಬೆಳೆದವರು ಕೈ ತುಂಬಾ ಹಣವನ್ನು ಪಡೆದುಕೊಂಡು ನೆಮ್ಮದಿಯ ಬಾಳೆ ಬಾಳುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬಾಳೆ ಬಿಟ್ಟರೆ ಯಾವ ಬೆಳೆಗೂ ಅಧಿಕ ದರ ಸಿಕ್ಕಿರುವುದಿಲ್ಲ.ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ಸಾಲದ ಕೂಪಕ್ಕೆ ಬೀಳುವಂತಾಗಿದ್ದರು. ಆದರೆ ಬಾಳೆ ಬೆಳೆದವರು ಮಾತ್ರ ಯಾವ ಸಮಸ್ಯೆಯ ಸುಳಿಗೂ ಸಿಗದೇ ನೆಮ್ಮದಿಯ ಬಾಳೆ ಬಾಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಚನ್ನಗಿರಿ ಪಟ್ಟಣದ ಹಳ್ಳದ ಹಿಂಭಾಗದಲ್ಲಿ ಕಳೆದ ಸಾಲಿನಲ್ಲಿ ಮೂರು ಎಕರೆ ಅಡಿಕೆ ತೋಟದ ನಡುವೆ ಮಿಶ್ರ ಬೆಳೆಯನ್ನಾಗಿ ಮನ್ಸೂರ್ ಆಲಿಖಾನ್ ಬಾಳೆಯನ್ನು ಹಾಕಿ ಸುಮಾರು ್ಙ 9 ಲಕ್ಷ ಆದಾಯ ಪಡೆದುಕೊಂಡು ಒಟ್ಟು ಖರ್ಚು ಕಳೆದು ನಿವ್ವಳ ್ಙ  7 ಲಕ್ಷ ಲಾಭವನ್ನು ಪಡೆದುಕೊಂಡಿದ್ದಾರೆ. ಮತ್ತೆ ಈಗ ಮೂರು ಎಕರೆಯಲ್ಲಿ ಪುಟ್ಟ ಬಳೆಯನ್ನು ಹಾಕಿ ಅಧಿಕ ಲಾಭವನ್ನು ಪಡೆಯುವತ್ತ ದಾಪುಗಾಲು ಇಟ್ಟಿದ್ದಾರೆ.3 ಎಕರೆ ಜಮೀನಿನಲ್ಲಿ 1700 ಪುಟ್ಟ ಬಾಳೆ ಕಂದುಗಳನ್ನು ಹಾಕಲಾಗಿದೆ. ಸಾಮಾನ್ಯವಾಗಿ ಬಾಳೆಗೆ ಬೂದಿ ಹಾಗೂ ಬೆಂಕಿರೋಗ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿಯಂತ್ರಣ ಮಾಡಿದರೆ ಸಮೃದ್ಧ ಬಾಳೆ ಇಳುವರಿ ಖಂಡಿತ ಸಿಗುತ್ತದೆ. ಪ್ರಸ್ತುತ ಒಂದು ಕೆ.ಜಿ. ಬಾಳೆಗೆ ಮಾರುಕಟ್ಟೆಯಲ್ಲಿ ್ಙ 18ರಿಂದ ್ಙ 20 ದರ ಇದೆ. ಮುಂದಿನ ಎರಡು ತಿಂಗಳಲ್ಲಿ ್ಙ 25ರಿಂದ 30 ಕ್ಕೆ ಹೆಚ್ಚುವ ಸಂಭವ ಇದೆ. ಒಂದು ಬಾಳೆಹಣ್ಣಿನ ಗೊನೆ 15 ಕೆ.ಜಿ. ತೂಗುವಷ್ಟು ಗಾತ್ರದಲ್ಲಿವೆ. ಬಾಳೆ ಸಿಕ್ಕಷ್ಟು ದರ ಬೇರೆ ಯಾವ ಬೆಳೆಗೂ ಇರುವುದಿಲ್ಲ. ಆದ್ದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಂತಾಗಿದೆ ಎನ್ನುತ್ತಾರೆ ರೈತರಾದ ಮನ್ಸೂರ್ ಆಲಿಖಾನ್.ತಾಲ್ಲೂಕಿನಲ್ಲಿ ಇವರೊಬ್ಬರೇ ಬಾಳೆ ಬೆಳೆದು ಲಾಭವನ್ನು ಪಡೆದುಕೊಂಡಿಲ್ಲ. ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಅಕಳಕಟ್ಟೆ, ಮುದ್ದೇನಹಳ್ಳಿ, ಬುಸ್ಸೇನಹಳ್ಳಿ, ಹಿರೇಉಡ, ಕಗತೂರು, ನಲ್ಲೂರು, ಹರಿಶಿನಘಟ್ಟ, ಹೊನ್ನೇಬಾಗಿ, ದಿಗ್ಗೇನಹಳ್ಳಿ, ಹಲಕನಾಳ್, ಚಿಕ್ಕಬೆನ್ನೂರು, ಗೊಲ್ಲರಹಳ್ಳಿ, ಕೆರೆಬಿಳಚಿ, ಲಿಂಗದಹಳ್ಳಿ, ಪೆನ್ನಸಮುದ್ರ,ಮರವಂಜಿ, ಶಂಕರಿಪುರ, ನೆಲ್ಲಿಹಂಕಲು, ಹನುಮಲಾಪುರ, ತಾವರೆಕೆರೆ, ದುರ್ವಿಗೆರೆ, ಮೇದುಗೊಂಡನಹಳ್ಳಿ, ಗಂಗಗೊಂಡನಹಳ್ಳಿ, ಮಾಡಾಳ್, ಮಾವಿನಕಟ್ಟೆ, ಗುರುರಾಜಪುರ, ಸೇವಾನಗರ, ಕಾಕನೂರು, ದೊಡ್ಡೇರಿಕಟ್ಟೆ, ಅರಳಿಕಟ್ಟೆ, ಹೊನ್ನೆಮರದಹಳ್ಳಿ, ಬೊಮ್ಮೇನಹಳ್ಳಿ, ನುಗ್ಗಿಹಳ್ಳಿ, ನೀತಿಗೆರೆ, ಹಿರೇಗಂಗೂರು, ಚಿಕ್ಕಗಂಗುರು, ಕೊರಟಿಕೆರೆ, ಬೆಂಕಿಕೆರೆ, ವಡ್ನಾಳ್ ಮುಂತಾದ ಗ್ರಾಮಗಳಲ್ಲಿ ಅಡಿಕೆ ಮರಗಳ ನಡುವೆ ಮಿಶ್ರ ಬೆಳೆಯಾಗಿ ಬಾಳೆ ಹಾಕಿ ಕೈ ತುಂಬಾ ಹಣವನ್ನು ರೈತರು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪಡೆದು ನೆಮ್ಮದಿ ಕಂಡಿದ್ದಾರೆ.ಬಾಳೆಗೊನೆ ಬರಲು ಆರಂಭವಾದ ಮೇಲೆ ಮಳೆಗಾಲದಲ್ಲಿ 15 ದಿನಗಳಿಗೊಮ್ಮೆ ಹಾಗೂ ಬೇಸಿಗೆಯಲ್ಲಿ 12 ದಿನಗಳಿಗೊಮ್ಮೆ ಕಟಾವಿಗೆ ಬರುತ್ತದೆ. ಕಾಯಿ ಬಲಿಯುವವರೆಗೆ ಬಿಟ್ಟಾಗ ಒಂದೊಂದು ಗೊನೆ 15ರಿಂದ 20 ಕೆ.ಜಿ.  ತೂಕ ಬರುತ್ತದೆ. ಒಟ್ಟಾರೆ ಕಳೆದ ಎರಡು ವರ್ಷಗಳಿಂದ ತಾಲ್ಲೂಕಿನಲ್ಲಿ ಬಾಳೆ ಬೆಳೆದ ರೈತರು ಕೈ ತುಂಬಾ ಹಣವನ್ನು ಮಾಡಿಕೊಂಡು ನೆಮ್ಮದಿಯ ಬಾಳನ್ನು ಬಾಳುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.