ಸೋಮವಾರ, ಏಪ್ರಿಲ್ 19, 2021
23 °C

ಬಾಳೇನಗಲ್ಲಿ: ಗುಂಪು ಘರ್ಷಣೆ-ಎಸ್ಪಿ ಭೇಟಿ ಕಲ್ಲು ತೂರಾಟ: ವಾಹನ ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಎರಡು ಕೋಮಿನ ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ಕಲ್ಲು ತೂರಾಟಕ್ಕೆ ತಿರುಗಿ, ಹಲವು  ಮನೆ- ವಾಹನಗಳು ಜಖಂಗೊಂಡ ಘಟನೆ ತಾಲ್ಲೂಕಿನ ಬಾಳೇನ ಗಲ್ಲಿಯಲ್ಲಿ ಗುರುವಾರ ರಾತ್ರಿ ನಡೆದಿದೆ.ಬಾಳೇನ ಗಲ್ಲಿಯ ಗುಂಪು ಮತ್ತು ಇನ್ನೊಂದು ಗುಂಪಿನ ಮಧ್ಯೆ ಸಿದ್ದಿಕಿ ಪ್ರಾರ್ಥನಾ ಮಂದಿರದ ಬಳಿ ಕ್ಷುಲ್ಲಕ ವಿಚಾರಗಳಿಗೆ ಚರ್ಚೆ-ಜಗಳ ನಡೆದಿದೆ. ಈ ಜಗಳದ ಹಿನ್ನೆಲೆಯಲ್ಲಿ ಇನ್ನೊಂದು ಗಲ್ಲಿಯ ಯುವಕರು ಬಾಳೇನ ಗಲ್ಲಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಲ್ಲು ಎಸೆದಿದ್ದಾರೆ.ಪಟ್ಟಣದ ಪ್ರಮುಖರಾದ ಮಲ್ಲಪ್ಪ ಹತ್ತರಕಿ ಮತ್ತು ಪಮ್ಮು ಹತ್ತರಕಿ ಅವರ ಮನೆ ಹಾಗೂ ವಾಹನಗಳಿಗೆ ಹಾನಿಯಾಗಿವೆ. ಮನೆಗಳ ಮುಂದೆ ಇದ್ದ ಮೂರು ಇಂಡಿಕಾ ಕಾರು, ಟಾಟಾ ಸುಮೊ, ಐದು ಅಟೋಗಳು ಹಾಗೂ ಎಂಟು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಲಾಗಿದೆ.  ಶಶಿಕಾಂತ ಕೋರಳ್ಳಿ, ಚನ್ನಪ್ಪ ಜಮಖಂಡಿ, ಬಸವರಾಜ ಹತ್ತರಕಿ, ಸೂರ್ಯಕಾಂತ ಮಡಿವಾಳ, ಕಲ್ಯಾಣರಾವ ತೋಳನೂರೆ ಅವರ ವಾಹನಗಳಿಗೆ ಹಾನಿಯಾಗಿದೆ.ಎಸ್‌ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್ ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಎರಡು ಗುಂಪುಗಳ ಮುಖಂಡರ ಮಧ್ಯೆ ಶಾಂತಿ ಮಾತುಕತೆ ನಡೆಸಲಾಯಿತು.  ಈ ಬಗ್ಗೆ ತನಿಖಾ ತಂಡವನ್ನು ರಚಿಸಿ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು.

 

ಡಿವೈಎಸ್‌ಪಿ ಎಸ್.ಬಿ.ಸಾಂಬಾ, ವೃತ್ತ ನಿರೀಕ್ಷಕ ಜಿ.ಎಸ್.ಉಡುಗಿ, ಸಬ್‌ಇನ್‌ಸ್ಪೆಕ್ಟರ್ ಹಾಲೇಶ ಇತರರಿದ್ದರು.

ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡ ಪರಿಣಾಮ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.