ಶನಿವಾರ, ಮೇ 21, 2022
27 °C

ಬಾವಾಸಾಹೇಬ ಖಾದ್ರಿ ಉರುಸ್ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಗೊಳಸಂಗಿಯ ಈ ಭಾಗದ ಪ್ರಸಿದ್ಧ ಸೂಫಿ ಸಂತ ಹಜರತ್, ಶೇಖ್ ಸೈದನಾ ಅಬ್ದುಲ್‌ರಹಿಮ್ ಖಾದ್ರಿ ಉರ್ಫ್ ಬಾವಾಸಾಹೇಬ ಖಾದ್ರಿ ಅವರ ಉರುಸ್ ಇದೇ ನಡೆಯಲಿದೆ.ಸಮಾನತೆ, ಮಾನವೀಯತೆ ಮುಂತಾದ ತತ್ವಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸಮಾಜದ ಸಾಮಾನ್ಯ ಜನತೆಯಲ್ಲಿ ದಯೆ, ದಾನ, ಪ್ರೀತಿ, ಅನುಕಂಪಗಳಂತಹ ಆದರ್ಶಗಳನ್ನು ಬಿಟ್ಟು ಹೋದಂತವರಲ್ಲಿ ಸೂಫಿ ಸಂತವಾಗಿರುವ ಖಾದ್ರಿ ಅವರು ಒಬ್ಬರಾಗಿದ್ದರು.ಮೂಲತಃ ಗುಜರಾತ್ ರಾಜ್ಯದ ಡೋಲುಖಾ ಜಿಲ್ಲೆಯಿಂದ ವಲಸೆ ಬಂದ ಇವರು ಮೊದಲು ವಿಜಾಪುರದಲ್ಲಿ ನೆಲೆ ನಿಂತು, ಸಿಕಂದರ್ ಆದಿಲ್‌ಷಾ ಸುಲ್ತಾನನ ಪ್ರೀತಿಗೆ ಪಾತ್ರರಾದರು. ನಂತರ ದೇವರ ಸಂದೇಶ ಸಾರಲೆಂದು ವಿಜಾಪುರದಿಂದ ದಕ್ಷಿಣಕ್ಕೆ ಗೊಳಸಂಗಿಗೆ ಬಂದರು. ಪ್ರಾರ್ಥನೆ, ಜನಕಲ್ಯಾಣಕ್ಕೆ ಈ ಪರಿಸರ ಯೋಗ್ಯವೆನಿಸಿ ಇಲ್ಲಿಯೆ ನೆಲೆನಿಂತು, ಗೊಳಸಂಗಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ತಮ್ಮ ಅನೇಕ ಪವಾಡಗಳಿಂದ ಭಕ್ತರ ಮನ ಸೆಳೆದರು. ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಭಕ್ತರು ಮನಸ್ಸನ್ನು ಹದಗೊಳಿಸಿ ಮಾನವೀಯತೆಯ ಮನುಕುಲಕ್ಕೆ ಅಡಿಪಾಯ ಹಾಕಿದರು.ಕೊನೆಗೆ 1700ನೇ ಇಸ್ವಿಯಲ್ಲಿ ಇಹ ಲೋಕ ತ್ಯಜಿಸಿದರು. ಇವರ ಅಂತ್ಯಕ್ರಿಯೆ ಗೊಳಸಂಗಿಯಲ್ಲಿ ಜರುಗಿತು. ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಸೂಫಿ ಸಂತ ಬಾವಾಸಾಹೇಬ ಖಾದ್ರಿ ರಹಿಮುತುಲ್ಲಾ ಅಲೈಯವರ ಮುಜಾರೇ ಶರೀಫವನ್ನು ಇದೇ 8ರಂದು ಹಿಂದೂ ಮುಸ್ಲಿಂ ಭಾವೈಕ್ಯದಿಂದ ಸೂಫಿ ಸಂತರ ಉರುಸ್ ಜರುಗಲಿದೆ. ಆ ದಿನ ಗಂಧ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.ಸದ್ಯದ 10ನೇ ಪೀಠಾಧೀಪತಿ ಹಜರತ್ ಸಯ್ಯದ್‌ಶಾ ಮಸೂದ್ದೀನ್ ಖಾದರಿ ಹಾಗೂ ಬಿರಾದರೆ ಸಜ್ಜಾದ್ದೀನ್ ಪೀರ್ ಅವರ ನೇತೃತ್ವದಲ್ಲಿ ನಡೆಯಲಿದೆ.8ರಂದು ಬೆಳಿಗ್ಗೆ 5.30 ಕ್ಕೆ ಜಾಗೀರದಾರ ಬಂಧುಗಳ ಮನೆಯಿಂದ ದರ್ಗಾಕ್ಕೆ ಗಂಧದ ಜಲೂಸ ತೆರಳಿ ಗಂಧದ ಕಾರ್ಯಕ್ರಮ ನಂತರ ಸೈಯದ್ ಮುನೀಪಾಶ್ಯಾಳ ಸಾಹೇಬ ಅವರಿಂದ ಫತೇಹಾಖಾನಿ ಕಾರ್ಯಕ್ರಮ ನಡೆಯಲಿದ್ದು, ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.