ಸೋಮವಾರ, ನವೆಂಬರ್ 18, 2019
25 °C

ಬಾವಿಗೆ ಬಿದ್ದ ಚಿರತೆ ರಕ್ಷಣೆ

Published:
Updated:

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕೆರೆ ಗ್ರಾಮ ಪಂಚಾ ಯಿತಿಯ ಕೆರೆಹೊಸ್ತೋಟ ನಾಗರಾಜ್ ಅವರ ತೋಟದ ಬಾವಿಗೆ ಚಿರತೆ ಯೊಂದು ಬಿದ್ದ ಘಟನೆ ಬುಧವಾರ ನಡೆದಿದೆ.ತೋಟದ ಬಾವಿಯಲ್ಲಿ ಚಿರತೆಯ ನರಳಾಟ ಕೇಳಿಸಿಕೊಂಡ ಶ್ರಿನಿವಾಸ್ ವನ್ಯಜೀವಿ ವಿಭಾಗದ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ ನಾಯಕ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರಿನಾಥ್ ಕಡೋಲ್ಕರ್ ಮತ್ತು ಸಿಬ್ಬಂದಿ ಬಾವಿಯಿಂದ ಚಿರತೆಯನ್ನು ಹೊರ ತೆಗೆದು ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಾವಿಗೆ ಬಿದ್ದ ಚಿರತೆಯ ಹಿಂಬದಿಯ ಎರಡು ಪಾದಗಳಿಗೆ ಪೆಟ್ಟಾಗಿದ್ದು, ಅದನ್ನು ಬೇಟೆ ಮಾಡುವ ಪ್ರಯತ್ನ ನಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಇದೀಗ ಕೆರೆಕಟ್ಟೆಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಇರಿಸಲಾಗಿದೆ.

ಪ್ರತಿಕ್ರಿಯಿಸಿ (+)