ಸೋಮವಾರ, ಏಪ್ರಿಲ್ 12, 2021
23 °C

ಬಾವಿಯಲ್ಲಿ ಗುಹೆ, ಮಿಂಚು ಕಲ್ಲು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರೂಗೇರಿ: ಸಮೀಪದ ಯಲ್ಪಾರಟ್ಟಿ ಬಂಗಲೆ ಹತ್ತಿರದ ಬಾವಿಯೊಂದರಲ್ಲಿ ಆಳವಾದ ಗುಹೆ ಕಂಡು ಬಂದಿದ್ದು, ಗುಹೆಯಲ್ಲಿ ಪಳಪಳನೆ ಹೊಳೆಯುವ ಕಲ್ಲುಗಳು, ಲಿಂಗ, ಗಣೇಶ, ಹಾವಿನ ಹುತ್ತವನ್ನು ಹೋಲುವ ವಿಚಿತ್ರವಾದ ಕಲ್ಲುಗಳು ಪತ್ತೆಯಾಗಿವೆ.ಯಲ್ಪಾರಟ್ಟಿ ಬಂಗಲೆ ಹತ್ತಿರದ ಅಜಿತ ಬಾನೆ ಎಂಬುವರು ತಮ್ಮ ತೋಟದಲ್ಲಿ ಬಾವಿ ತೋಡುವಾಗ ಈ ಗುಹೆ ಪತ್ತೆಯಾಗಿದೆ. ಸುಮಾರು 30ಕ್ಕಿಂತ ಹೆಚ್ಚು ಅಡಿ ಬಾವಿಯ ತಳಬಾಗದಲ್ಲಿ ಈ ಗುಹೆ ಕಂಡು ಬಂದಿದ್ದು, ಇದನ್ನು ನೋಡಲು 2 ದಿನಗಳಿಂದ ಜನಸಾಗರವೇ ಹರಿದು ಬರುತ್ತಿವೆ. ಬುಧವಾರ ಈ ಗುಹೆಯೊಳಗೆ ಸುಮಾರು 50 ಜನ ಹೋಗಿ ಬಂದಿದ್ದಾರೆನ್ನಲಾಗಿದೆ. ಇಲ್ಲಿ ಹೊಳೆಯುವ, ಮುಳ್ಳಿನಾಕಾರದ ಕಲ್ಲುಗಳು ಕಂಡು ಬಂದಿದ್ದು, ಒಳಹೋಗಿ ಬಂದ ಹಲವರು ಕಲ್ಲುಗಳನ್ನು ಒಯ್ದಿದಿದ್ದಾರೆ. ಗುಹೆಯಲ್ಲಿ ಸುಮಾರು 100 ಜನರು ಹಿಡಿಯಬಹುದಾದ ಸ್ಥಳವಿದೆಯಂತೆ. ಇದನ್ನು ಪೂರ್ತಿಯಾಗಿ ಶೋಧಿಸಿದರೆ ಪುರಾತನ ಗುಹೆಗಳು ಪತ್ತೆಯಾಗಬಹುದೆಂದು ಜನರು ಮಾತನಾಡುತ್ತಿದ್ದಾರೆ. ಸದ್ಯ ಬಾವಿ ತೋಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.ರಾಯಬಾಗ ವರದಿ

ಗುರುವಾರ ಬೆಳಿಗ್ಗೆ ತಹಶೀಲ್ದಾರ ಶಿವಾನಂದ ಸಾಗರ ಕಂದಾಯ ನಿರೀಕ್ಷಕ ಎನ್.ಬಿ. ಗೆಜ್ಜಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರೂ ಸಹ ಕಲ್ಲುಗಳನ್ನು ತೆಗದುಕೊಂಡು ಬಂದಿದ್ದಾರೆ.

ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆಗೆ ವಿವರ ನೀಡಿ ಮುಂದಿನ ಕ್ರಮಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.