ಮಂಗಳವಾರ, ಮೇ 18, 2021
30 °C

`ಬಾಷ್' ನಿರ್ದೇಶಕ ಮಂಡಳಿ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಾಷ್ ಲಿ.' ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕ  ಹುದ್ದೆಯಿಂದ ಡಾ. ಎ.ಹೈರೋನಿಮಸ್ ಅವರು ಜು. 1ರಂದು ನಿರ್ಗಮಿಸಲಿದ್ದು, ವಿ.ಕೆ.ವಿಶ್ವನಾಥನ್ ಅವರು ನೂತನ ಅಧ್ಯಕ್ಷರಾಗಿ ಅಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಡಾ. ಬರ್ನ್ಡ್ ಬೊಹ್ರ್ ನಿರ್ದೇಶಕ ಸ್ಥಾನಕ್ಕೆ ಮತ್ತು ಮುತ್ತುರಾಮನ್ ಕಾರ್ಯನಿರ್ವಾಹಕೇತರ ನಿರ್ದೇಶಕ ಹುದ್ದೆಗೆ ಜು. 1ರಂದು ರಾಜೀನಾಮೆ ಸಲ್ಲಿಸಲಿದ್ದಾರೆ. ನಂತರ ಪೀಟರ್ ಟೈರೋಲರ್ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕರ ಹುದ್ದೆ ಅಲಂಕರಿಸಲಿದ್ದಾರೆ ಎಂದು ಕಂಪೆನಿಯ ನಿರ್ದೇಶಕ ಮಂಡಳಿ ಪ್ರಕಟಣೆಯಲ್ಲಿ ಗುರುವಾರ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.