ಗುರುವಾರ , ನವೆಂಬರ್ 21, 2019
27 °C

ಬಾಸ್ಟನ್: ಶೋಧ, ಗುಂಡಿನ ಚಕಮಕಿ, ಬಂಧಿತನ ಸಾವು, ಇನ್ನೊಬ್ಬ ಪರಾರಿ

Published:
Updated:

ಬಾಸ್ಟನ್ (ಪಿಟಿಐ) : `ಬಾಸ್ಟನ್ ಮ್ಯಾರಥಾನ್' ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ವಶಕ್ಕೆ ತೆಗೆದುಕೊಂಡ ಶಂಕಿತನೊಬ್ಬ ಸಾವನ್ನಪ್ಪಿದ್ದು, ಗುಂಡಿನ ಘರ್ಷಣೆ ವೇಳೆ  ಇನ್ನೋರ್ವ ತಪ್ಪಿಸಿಕೊಂಡಿದ್ದಾನೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿದೆ.ಶುಕ್ರವಾರ ನಸುಕಿನ ವೇಳೆಯಲ್ಲಿ ಪೊಲೀಸರು ಒಬ್ಬ ಶಂಕಿತನನ್ನು ಶೋಧ ಕಾರ್ಯಾಚರಣೆಯಲ್ಲಿ ಗುಂಡಿನ ಚಕಮಕಿ ಬಳಿಕ ವಶಕ್ಕೆ ತೆಗೆದುಕೊಂಡಿದ್ದರು. ಇನ್ನೊಬ್ಬ ಅಟ್ಟಿಸಿಕೊಂಡು ಹೋದರೂ ಸಿಗದೆ ಪರಾರಿಯಾದ ಎಂದು ವರದಿಗಳು ತಿಳಿಸಿವೆ.ಮ್ಯಾರಥಾನ್ ವೇಳೆ ಇರಿಸಲಾಗಿದ್ದ ಕಣ್ಗಾವಲು ಕ್ಯಾಮೆರಾಗಳ ವಿಡಿಯೋವನ್ನು ಆಧರಿಸಿ ಎಫ್‌ಬಿಐ, ಶಂಕಿತರ ವೀಡಿಯೋ ಚಿತ್ರಗಳನ್ನು ಬಿಡುಗಡೆ ಮಾಡಿದ ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಶೋಧ ಸಂದರ್ಭದಲ್ಲಿ ವಾಟರ್ ಟೌನ್‌ನಲ್ಲಿ ಪೊಲೀಸರು ಮತ್ತು ಶಂಕಿತರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆಯಲ್ಲಿ ಗಾಯಗೊಂಡ ಓರ್ವ ಶಂಕಿತನನ್ನು ಸೆರೆಹಿಡಿಯಲಾಯಿತು. ಇನ್ನೋರ್ವ ಶಂಕಿತ ಕಣ್ತಪ್ಪಿಸಿಕೊಂಡ ಎಂದು ಬಾಸ್ಟನ್ ಗ್ಲೋಬಲ್ ವರದಿ ಮಾಡಿದೆ.ಪರಾರಿಯಾದ ವ್ಯಕ್ತಿಯ ಪತ್ತೆಗಾಗಿ ನಗರದಾದ್ಯಂತ ಬಿಗಿ ಕಾವಲು ವ್ಯವಸ್ಥೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)