ಬಾಹ್ಯಾಕಾಶ: ಹೂಡಿಕೆಗೆ ಮನವಿ

7

ಬಾಹ್ಯಾಕಾಶ: ಹೂಡಿಕೆಗೆ ಮನವಿ

Published:
Updated:

ಬೆಂಗಳೂರು: ‘ಬಾಹ್ಯಾಕಾಶ ಕ್ಷೇತ್ರದಲ್ಲಿ ಬಂಡವಾಳ ಹೂಡಲು ನಗರದಲ್ಲಿ ವಿಫುಲ ಅವಕಾಶಗಳಿವೆ. ಇದರ ಸದುಪಯೋಗ ಪಡೆದುಕೊಂಡು ಬಂಡವಾಳ ಹೂಡಲು ಮುಂದೆ ಬನ್ನಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾದ ಉದ್ಯಮಿಗಳಿಗೆ ಮನವಿ ಮಾಡಿದರು.ಮಂಗಳವಾರ ಇಲ್ಲಿ ತಮ್ಮನ್ನು ಭೇಟಿ ಮಾಡಿದ ಅಮೆರಿಕ- ಇಂಡಿಯಾ ವಾಣಿಜ್ಯ ಕೌನ್ಸಿಲ್ ಅಧ್ಯಕ್ಷ ವಾಲ್ಟರ್ ಎಫ್.ಡೊರನ್ ನೇತೃತ್ವದ ನಿಯೋಗಕ್ಕೆ ಈ ರೀತಿಯ ಮನವಿ ಮಾಡಿದ ಅವರು, ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 984 ಎಕರೆ ಜಾಗದಲ್ಲಿ ‘ಬಾಹ್ಯಾಕಾಶ ಪಾರ್ಕ್’ ಮತ್ತು 252 ಎಕರೆ ಜಾಗದಲ್ಲಿ ಬಾಹ್ಯಾಕಾಶ ಕೈಗಾರಿಕೆಗಳಿಗೆ ಸಂಬಂಧಿಸಿದ ‘ವಿಶೇಷ ಆರ್ಥಿಕ ವಲಯ’ ಸ್ಥಾಪನೆಯಾಗುತ್ತಿದೆ.ಇಲ್ಲಿ ಬಂಡವಾಳ ಹೂಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಲು ಒಳ್ಳೆಯ ಅವಕಾಶಗಳಿವೆ ಎಂದು ಭಾರತೀಯ ಕೈಗಾರಿಕೋದ್ಯಮಿಗಳ ಒಕ್ಕೂಟ ತಿಳಿಸಿದೆ. ಬೆಂಗಳೂರು ದೇಶದ ಬಾಹ್ಯಾಕಾಶ ರಾಜಧಾನಿಯಾಗಿದ್ದು, ಜಾಗತಿಕ ಮಟ್ಟದ ಕಂಪೆನಿಗಳು ಇಲ್ಲಿವೆ ಎಂದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, ಬೆಂಗಳೂರು ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ತಾಣವಾಗಿದೆ. ಈ ಕ್ಷೇತ್ರದ ಶೇ 65ರಷ್ಟು ವಹಿವಾಟು ಇಲ್ಲಿ ಆಗುತ್ತಿದೆ. ಸಾಕಷ್ಟು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ನಗರದಲ್ಲಿದ್ದು, 100 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಬಂಡವಾಳ ಹೂಡಿಕೆಯಾಗುವ ವಿಶ್ವಾಸವಿದೆ ಎಂದರು.1978ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದೆ. ಈಗ ಊಹೆಗೂ ನಿಲುಕದಷ್ಟು ಬೆಳೆದಿದೆ. ಭವಿಷ್ಯದಲ್ಲಿ ಎರಡೂ ರಾಷ್ಟ್ರಗಳ ನಡುವೆ ಇನ್ನಷ್ಟು ಸಮನ್ವಯ ಏರ್ಪಡುವ ವಿಶ್ವಾಸವಿದೆ ಎಂದು ವಾಲ್ಟರ್ ತಿಳಿಸಿದರು.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್, ಆಯುಕ್ತ ರಾಜ್‌ಕುಮಾರ್ ಕತ್ರಿ, ಮೂಲಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಧು ಮೊದಲಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry