ಬಿಂಚೆ ಜಾತ್ರೆಯ ಬೆರಗು

ಶನಿವಾರ, ಜೂಲೈ 20, 2019
28 °C

ಬಿಂಚೆ ಜಾತ್ರೆಯ ಬೆರಗು

Published:
Updated:

ಬೆಲ್ಜಿಯಂನ ಬಿಂಚೆಯಲ್ಲಿ ಪ್ರತಿವರ್ಷ ಪ್ರಸಿದ್ಧವಾದ ಜಾತ್ರೆಯೊಂದು ನಡೆಯುತ್ತದೆ. ಫೆಬ್ರುವರಿ-ಮಾರ್ಚ್ ಬಂತೆಂದರೆ ಇಲ್ಲಿನ ಕ್ರಿಶ್ಚಿಯನ್ನರು `ಲೆಂಟ್~ ಹಬ್ಬದ ಆಚರಣೆಯಲ್ಲಿ ಮುಳುಗುತ್ತಾರೆ. ಬಿಂಚೆ ಜಾತ್ರೆ ನಡೆಯುವುದೂ ಅದರ ಭಾಗವಾಗಿಯೇ.`ಲೆಂಟ್~ ಆಚರಣೆಗೆ ಆರು ವಾರ ಮುಂಚಿತವಾಗಿಯೇ ಜಾತ್ರೆಯ ಕ್ಷಣಗಣನೆ ಶುರುವಾಗುತ್ತದೆ. ಪ್ರಾರ್ಥನೆ ಸಲ್ಲಿಸುವುದು, ಬಂಧು-ಬಾಂಧವರನ್ನು ಆಹ್ವಾನಿಸುವುದು, ಬಗೆಬಗೆಯ ತಿಂಡಿ-ತಿನಿಸು ಮಾಡುವುದು ಈ ಅವಧಿಯಲ್ಲಿ ಪ್ರಾರಂಭವಾಗುತ್ತದೆ. `ಲೆಂಟ್~ಗೆ ಮೂರು ದಿನ ಬಾಕಿ ಇರುವಾಗ ಜಾತ್ರೆ ರಂಗೇರುತ್ತದೆ.ಕಡುಗೆಂಪು, ಹಳದಿ ಹಾಗೂ ಕಪ್ಪು ಉಡುಪುಗಳನ್ನು ತೊಟ್ಟ `ಜೈಲ್ಸ್~ ಸಂಗೀತ ಜಾತ್ರೆಯ ವಿಶೇಷ. ನೂರಾರು ಜನರು ಕಣ್ಣುಕೋರೈಸುವ ಉಡುಗೆಗಳನ್ನು ತೊಟ್ಟು ಸಂಗೀತದ ಔತಣ ಉಣಬಡಿಸುತ್ತಾರೆ. ಮೇಣದ ಮುಖವಾಡ ತೊಟ್ಟು ಸಂಗೀತದ ಮೂಲಕ ರಂಜಿಸುತ್ತಾರೆ.`ಮಾರ್ಡಿ ಗ್ರಾಸ್~ ಎಂಬುದು ಜಾತ್ರೆಯ ಕೊನೆಯ ದಿನ. ಅಂದು `ಜೈಲ್ಸ್~ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ದೇವರಿಗೆ ಸಂಗೀತ ಪ್ರಾರ್ಥನೆ ಸಲ್ಲಿಸುತ್ತಾರೆ.

 

ಕೈಯಲ್ಲಿ ಕಡ್ಡಿ ಹಿಡಿದು ಆಡಿಸುವುದು ಕೆಡಕುಗಳನ್ನು ಹೊಡೆದೋಡಿಸುವುದರ ಸಂಕೇತ. ಬೆಲ್ಟಿಗೆ ಸಿಕ್ಕಿಸಿಕೊಂಡ ಗಂಟೆಗಳ ಸದ್ದು, ತಲೆಮೇಲಿನ ಟೋಪಿಗಳಲ್ಲಿನ ಆಸ್ಟ್ರಿಚ್ ಗರಿ `ಜೈಲ್ಸ್~ ಬೆರಗನ್ನು ಹೆಚ್ಚುಮಾಡುತ್ತದೆ. ಬ್ರಾಸ್ ಬ್ಯಾಂಡ್‌ನ ಸಾಥ್ ಸಂಗೀತಕ್ಕೆ ಮೆರುಗು.ರಸ್ತೆಯ ಉದ್ದಕ್ಕೂ `ಜೈಲ್ಸ್~ ಮೆರವಣಿಗೆ ಬಂದಾಗ ಗಂಧರ್ವಲೋಕವೇ ಸೃಷ್ಟಿಯಾದಂತೆ ಜನ ಸುಖಿಸುತ್ತಾರೆ. ಪಟಾಕಿ, ಮತಾಪುಗಳನ್ನು ಸಿಡಿಸಿ ಜನ ಜಾತ್ರೆಯಲ್ಲಿ ಎಲ್ಲರೊಳಗೊಂದಾಗುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry